ಬಿಜೆಪಿಗೆ ತಲೆ ಬಾಗುವುದಕ್ಕಿಂತ ಸಾಮಾಜಿಕ ನ್ಯಾಯಕ್ಕಾಗಿ ಸಾಯಲು ಸಿದ್ಧ: ಲಾಲು

Update: 2018-01-06 16:14 GMT

ಹೊಸದಿಲ್ಲಿ, ಜ. 6: ಮೇವು ಹಗರಣಕ್ಕೆ ಸಂಬಂಧಿಸಿ 3.5 ವರ್ಷ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್, ತಾನು ಬಿಜೆಪಿಗೆ ತಲೆಬಾಗುವುದಕ್ಕಿಂತ ಸಾಮಾಜಿಕ ನ್ಯಾಯಕ್ಕಾಗಿ ಸಾಯಲು ಸಿದ್ದ ಎಂದಿದ್ದಾರೆ. ಬಿಜೆಪಿಯ ಸರಳ ನಿಯಮ ‘ನಮ್ಮನ್ನು ಅನುಸರಿಸಿ ಇಲ್ಲದಿದ್ದರೆ, ನಾವು ನಿಮಗೆ ಶಾಸ್ತಿ ಮಾಡುತ್ತೇವೆ’ ಎಂಬುದನ್ನು ಆಚರಿಸುವ ಬದಲು ನಾನು ಸಾಮಾಜಿಕ ನ್ಯಾಯ, ಸೌಹಾರ್ದ ಹಾಗೂ ಸಮಾನತೆಗೆ ಸಾಯಲು ಸಿದ್ಧ ಎಂದು ಲಾಲು ಪ್ರಸಾದ್ ಹೇಳಿದ್ದಾರೆ. ಒಂದು ವೇಳೆ ಲಾಲು ಬಿಜೆಪಿಯೊಂದಿಗೆ ರಾಜಿ ಮಾಡಿಕೊಂಡರೆ, ಅವರು ರಾಜಾ ಹರಿಶ್ಚಂದ್ರನಂತೆ ಅತಿ ಹೆಚ್ಚು ನಂಬಿಕೆಯ ವ್ಯಕ್ತಿಯಾಗುತ್ತಾರೆ.

ಲಾಲು ಅವರು ಜೈಲಿನಲ್ಲಿ ಇದ್ದರೂ ಬಿಜೆಪಿ ಹಾಗೂ ಆರೆಸ್ಸೆಸ್ ಹೆದರುತ್ತಿರುವುದು ಸ್ಪಷ್ಟ. ಲಾಲು ಅವರ ಧ್ವನಿ ನಿಗ್ರಹಿಸಲು ಅವರು ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಆರ್‌ಜೆಡಿ ವರಿಷ್ಠನ ಪುತ್ರ ತೇಜಸ್ವಿ ತಿಳಿಸಿದ್ದಾರೆ. 21 ವರ್ಷಗಳ ಹಿಂದೆ ದಿಯೋಗಢ ಖಜಾನೆಯಿಂದ 89.27 ಲಕ್ಷ ರೂಪಾಯಿ ತೆಗೆದ ವಂಚನೆಗೆ ಸಂಬಂಧಿಸಿದ ಮೇವು ಹಗರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಲಾಲು ಪ್ರಸಾದ್‌ಗೆ ಶನಿವಾರ 3.5 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News