ಜಿಡಿಪಿ ಇಳಿಕೆ: ಪ್ರಧಾನಿ, ಜೇಟ್ಲಿಗೆ ರಾಹುಲ್ ತರಾಟೆ

Update: 2018-01-06 16:25 GMT

ಹೊಸದಿಲ್ಲಿ, ಜ. 6: ಅಂಕಿ-ಅಂಶ ಹಾಗೂ ಕಾರ್ಯಕ್ರಮ ನಿರ್ವಹಣಾ ಸಚಿವಾಲಯ 2017-18ರ ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ)ಪಟ್ಟಿ ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರನ್ನು ಟ್ವಿಟ್ಟರ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಸಕ್ತ ತ್ರೈಮಾಸಿಕದಲ್ಲಿ ಜಿಡಿಪಿ ದರ ಇಳಿಕೆ ಆಗಿರುವುದರ ಬಗ್ಗೆ ಎನ್‌ಡಿಎ ಸರಕಾರವನ್ನು ವ್ಯಂಗ್ಯ ಮಾಡಿದ ರಾಹುಲ್ ಗಾಂಧಿ, ಇದು ಆರ್ಥಿಕತೆಯ ಬೆಳವಣಿಗೆಗೆ ಕಾರಣರಾದ ಜೇಟ್ಲಿ ಅವರ ‘ಬುದ್ಧಿವಂತಿಕೆ’ ಹಾಗೂ ಮೋದಿ ಅವರ ‘ವಿಭಜನೀಯ ರಾಜಕೀಯ’ಕ್ಕೆ ಸಲ್ಲಬೇಕು ಎಂದರು. ಹೂಡಿಕೆ, ಬ್ಯಾಂಕ್ ಸಾಲದ ಪ್ರಗತಿ, ಉದ್ಯೋಗ ಸೃಷ್ಟಿ ಹಾಗೂ ಕೃಷಿ ಬೆಳವಣಿಗೆ ನಿಧಾನವಾಗಿರುವುದಕ್ಕೆ ರಾಹುಲ್ ಗಾಂಧಿ ಮೋದಿ ಹಾಗೂ ಅರುಣ್ ಜೇಟ್ಲಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2016-17ರ ಜಿಡಿಪಿ ಪ್ರಗತಿಯ ದರ ಶೇ. 7.1ಕ್ಕೆ ಹೋಲಿಸಿದರೆ, 2017-08ರ ಜಿಡಿಪಿ ಪ್ರಗತಿಯ ದರ ಶೇ. 6.5 ಎಂದು ಅಂದಾಜಿಸಲಾಗಿದೆ ಎಂದು ಅಂಕಿ-ಅಂಶ ಹಾಗೂ ಯೋಜನೆ ಅನುಷ್ಠಾನ ಸಚಿವಾಲಯ ಶುಕ್ರವಾರ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News