ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐದು ದಿನಗಳ ಕಾರ್ಯಾಗಾರ

Update: 2018-01-09 07:59 GMT

ಮೂಡುಬಿದಿರೆ, ಜ. 9: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ  ಆಶ್ರಯದಲ್ಲಿ ಚೆನ್ನೈನ  ಐ.ಟಿ.ಸಿ. ಅಕಾಡಮಿಯ ಸಹಯೋಗದೊಂದಿಗೆ ಫೈರ್ ವಾಲ್ ತಂತ್ರಜ್ಞಾನದ ಬಳಕೆಯ ಕುರಿತು ಐದು ದಿನಗಳ ಕಾರ್ಯಾಗಾರದ ಉದ್ಘಾಟನೆ ಇತ್ತೀಚಿಗೆ ನಡೆಯಿತು.

ಪಾಲೊ ಆಲ್ಟೊ ನೆಟ್ ವರ್ಕ್ ನ ತರಬೇತುದಾರರಾದ ಷಣ್ಮುಗ ವೇಲು ಸೋಮು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜ.12  ರವರೆಗೆ ನಡೆಯುವ ಈ ತರಬೇತಿಯ ಮಹತ್ವವನ್ನು ವಿವರಿಸಿ ಮಾತನಾಡಿದ ಷಣ್ಮುಗ ಅವರು, ಇಂದಿನ ಕ್ಲೌಡ್ ಕಂಪ್ಯೂಟರಿಂಗ್ ಯುಗದಲ್ಲಿ ನಾವು ದತ್ತಾಂಶವನ್ನು  ಸುರಕ್ಷಿತವಾಗಿಡುವುದು ಬಹು ಮುಖ್ಯವಾಗಿದ್ದು, ಫೈರ್ ವಾಲ್ ತಂತ್ರಜ್ಞಾನವು ಈ ದತ್ತಾಂಶವನ್ನು ಸುರಕ್ಷಿತವಾಗಿಡಲು ಸಹಕರಿಸುತ್ತದೆ.  ಹಾಗೂ ದತ್ತಾಂಶವನ್ನು  ಅಧಿಕೃತವಾಗಿ ಉಪಯೋಗಿಸುವವರು ಸುರಕ್ಷಿತವಾಗಿ ಉಪಯೋಗಿಸಬಹುದು ಎಂದರು.

ಐ.ಸಿ.ಟಿ. ಅಕಾಡಮಿಯ ಪ್ರತಿನಿಧಿ ಬಸವದರ್ಶನ ಅವರು ಮಾತನಾಡಿ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜ್ ನೊಂದಿಗೆ ಮಾಡಿಕೊಂಡ ಒಡಂಬಡಿಕೆಯ ಅನ್ವಯ ಕಾರ್ಯಗಾರದಲ್ಲಿ ಭಾಗವಹಿಸಿದ ಪ್ರತಿ ಪ್ರಾಧ್ಯಾಪಕರುಗಳಿಗೆ ಐ.ಸಿ.ಟಿ ಅಕಾಡಮಿಯ ವತಿಯಿಂದ ಫೈರ್ ವಾಲ್ ಲೈಸೆನ್ಸ್ ನೀಡಲಾಗುವುದು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಆಳ್ವಾಸ್ ಪದವಿ ಕಾಲೇಜಿನ ಡಾ. ಕುರಿಯನ್ ಮಾತನಾಡಿ, ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ತಮ್ಮ ಕೌಶಲ್ಯವನ್ನು  ದಿನೇ ದಿನೇ ಅಭಿವೃದ್ಧಿ ಪಡಿಸಿಕೊಳ್ಳಬೇಕು. ಇಂದಿನ ಕಂಪ್ಯೂಟರ್ ಯುಗದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ  ಪ್ರಾಧ್ಯಾಪಕರು ಹೊಸ ಹೊಸ ವಿಷಯವನ್ನು  ಕಲಿತು ಕಲಿಸಬೇಕಾದ ಸಂದರ್ಭ ಸೃಷ್ಟಿಯಾಗಿದೆ  ಎಂದರು.

ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೊಠಾರಿ ಅತಿಥಿಗಳನ್ನು ಸ್ವಾಗತಿಸಿ, ಮಾತನಾಡಿ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ಮತ್ತು ಐ.ಸಿ.ಟಿ ಅಕಾಡಮಿಯ ಒಡಂಬಡಿಕೆಯನ್ವಯ ಇದು ಪ್ರಥಮ ಕಾರ್ಯಾಗಾರವಾಗಿದ್ದು, ರಾಜ್ಯದ ವಿವಿಧ ಐ.ಸಿ.ಟಿ ಅಕಾಡೆಮಿಯ ಪಾಲುದಾರ ಕಾಲೇಜುಗಳಿಂದ  ಸುಮಾರು 40 ಜನ ಪ್ರಾಧ್ಯಾಪಕರು ಭಾಗವಹಿಸಿದ್ದಾರೆ ಎಂದರು. 

ಪ್ರೊ.ವಾಸುದೇವ ಶಹಪುರ ವಂದಿಸಿದರು. ಪ್ರೊ ಹರೀಶ್ ಕುಂದರ್ ಸಂಯೋಜಿಸಿ, ಮೇಘಾ ಕಾರ್ಯಕ್ರಮ ನಿರೂಪಿಸಿದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News