ಅಂತರ್ ಶಾಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆ: ಬರಾಖ್ ಇಂಟರ್ ನ್ಯಾಶನಲ್ ಸ್ಕೂಲ್ ಚಾಂಪಿಯನ್

Update: 2018-01-09 09:43 GMT

ಹೊಸದಿಲ್ಲಿ, ಜ. 9: ಮಂಗಳೂರಿನ ಅಶೋಕ್ ನಗರದಲ್ಲಿರುವ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಅಂತರ್ ಶಾಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆ ನಡೆಯಿತು.

ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿ ಮತ್ತು ಮಂಗಳೂರು  ಹೈಫ್ಲೈಯರ್ಸ್‌  ಸ್ಕೇಟಿಂಗ್ ಕ್ಲಬ್  ಆಯೋಜಿಸಿದ್ದ ಈ  ಸ್ಪರ್ಧೆಯಲ್ಲಿ  ಮಂಗಳೂರಿನ 32 ಶಾಲೆಗಳ  ಸ್ಕೇಟಿಂಗ್ ಪಟುಗಳು ಭಾಗವಹಿಸಿದ್ದರು. 9 ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ನೈನಾ ಶಿವರಾಜ್ ಸ್ಕೇಟಿಂಗ್ ಸ್ಪರ್ಧೆಯ ನೇತೃತ್ವ ವಹಿಸಿದ್ದರು.

 ಬರಾಖ್ ಇಂಟರ್ ನ್ಯಾಶನಲ್ ಸ್ಕೂಲ್ (ಬಿಐಸಎಸ್) ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಮೊದಲ ಸಮಗ್ರ ಚಾಂಪಿಯನ್ ಶಿಪ್ ನ್ನು ಗೆದ್ದುಕೊಂಡಿದೆ.

ನೈನಾ ಶಿವರಾಜ್ ಮಾರ್ಗದರ್ಶನದಲ್ಲಿ  ಸ್ಕೇಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News