×
Ad

ಅಧಿಕ ಉಷ್ಣಾಂಶ: ಮೆದುಳು ಸುಟ್ಟು ಸಾಯುತ್ತಿವೆ ಬಾವಲಿಗಳು

Update: 2018-01-09 21:43 IST

ಸಿಡ್ನಿ (ಆಸ್ಟ್ರೇಲಿಯ), ಜ. 9: ಆಸ್ಟ್ರೇಲಿಯದಲ್ಲಿ ಹೆಚ್ಚುತ್ತಿರುವ ಉಷ್ಣಾಂಶದ ಹಿನ್ನೆಲೆಯಲ್ಲಿ ನೂರಾರು ಬಾವಲಿಗಳು ಸತ್ತಿವೆ ಎಂದು ವನ್ಯಜೀವಿ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

 ಉಷ್ಣಾಂಶದಲ್ಲಿನ ತೀವ್ರ ಹೆಚ್ಚಳದಿಂದಾಗಿ ಬಾವಲಿಗಳ ಮೆದುಳು ಸುಟ್ಟು, ಅವುಗಳು ಮರದ ಟೊಂಗೆಗಳಿಂದ ಕೆಳಗೆ ಬೀಳುತ್ತಿವೆ.

ದಾಖಲೆಯ ಉಷ್ಣ ಅಲೆಯಿಂದಾಗಿ ಸಿಡ್ನಿಯ ಪಶ್ಚಿಮದ ಉಪನಗರ ಕ್ಯಾಂಬೆಲ್‌ಟೌನ್‌ನಲ್ಲಿ ರವಿವಾರ ಉಷ್ಣತೆಯು 45 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತು. ಅಲ್ಲಿ ನೂರಾರು ಬಾವಲಿಗಳು ಉಷ್ಣತೆಯಿಂದ ಬಸವಳಿದು ಮರಗಳಿಂದ ಕೆಳಗೆ ಬಿದ್ದವು.

‘‘ಅವುಗಳು ಬಿಸಿಯಲ್ಲಿ ಕುದಿಯುತ್ತಿವೆ’’ ಎಂದು ಕ್ಯಾಂಬೆಲ್‌ಟೌನ್ ಫ್ಲೈಯಿಂಗ್ ಫಾಕ್ಸ್ ಕಾಲನಿಯ ವ್ಯವಸ್ಥಾಪಕಿ ಕೇಟ್ ರಯಾನ್ ಸ್ಥಳೀಯ ‘ಕ್ಯಾಮ್ಡನ್ ಅಡ್ವರ್ಟೈಸರ್’ ಪತ್ರಿಕೆಗೆ ಹೇಳಿದರು.

‘‘ಶಾಖವು ಅವುಗಳ ಮೆದುಳಿನ ಮೇಲೆ ಪರಿಣಾಮ ಬೀರುತ್ತವೆ. ಅವುಗಳ ಮೆದುಳು ಬಿಸಿಯಲ್ಲಿ ಹುರಿಯಲ್ಪಡುತ್ತವೆ ಹಾಗೂ ಅವುಗಳು ನಿಯಂತ್ರಣ ಕಳೆದುಕೊಳ್ಳುತ್ತವೆ’’ ಎಂದರು.

ಆಸ್ಟ್ರೇಲಿಯದ ಅತಿ ದೊಡ್ಡ ಬಾವಲಿ ತಳಿಯಾಗಿರುವ ‘ಫ್ಲೈಯಿಂಗ್ ಫಾಕ್ಸ್’ನ್ನು ‘ದುರ್ಬಲ’ ತಳಿ ಎಂಬುದಾಗಿ ಪರಿಗಣಿಸಲಾಗಿದೆ.

 ಸಿಡ್ನಿಯು 1939ರ ಬಳಿಕ ರವಿವಾರ ಅತ್ಯಂತ ಬಿಸಿ ದಿನವೊಂದಕ್ಕೆ ಸಾಕ್ಷಿಯಾಯಿತು. ಅದರ ಉಪನಗರ ಪೆನ್‌ರಿತ್‌ನಲ್ಲಿ 47.3 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News