ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಶೀರ್ ಮನೆಗೆ ಧಾರ್ಮಿಕ ವಿದ್ವಾಂಸರು, ಸಾಮಾಜಿಕ ಮುಖಂಡರ ನಿಯೋಗ ಭೇಟಿ

Update: 2018-01-10 11:44 GMT

ಮಂಗಳೂರು, ಜ. 10: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಆಕಾಶಭವನದ ಬಶೀರ್ ಅವರ ಮನೆಗೆ ಧಾರ್ಮಿಕ ವಿದ್ವಾಂಸರು, ಸಾಮಾಜಿಕ ಮುಖಂಡರ ನೇತೃತ್ವದ ನಿಯೋಗ ಭೇಟಿ ನೀಡಿ ಸಾಂತ್ವನ ಹೇಳಿದರು.

ಅಸೈಯದ್ ಇಬ್ರಾಹೀಂ ಖಲೀಲ್ ಕಡಲುಂಡಿ ತಂಙಳ್, ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಇದರ ಪ್ರಧಾನ ಕಾರ್ಯದರ್ಶಿ ಹಾಜಿ ಬಿ.ಎಂ. ಮುಮ್ತಾಝ್ ಅಲಿ, ಎಸ್ ವೈ ಎಸ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ, ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ. ಸಿದ್ದೀಖ್ ಮೋಂಟುಗೋಳಿ, ಕೆಸಿಎಫ್ ಗಲ್ಫ್ ರಾಷ್ಟ್ರದ ಕೋಶಾಧಿಕಾರಿ ಅಬೂಬಕರ್ ರೈಸ್ಕೊ ಹಾಗು ಇತರ ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News