×
Ad

ಸೇನಾ ನೇಮಕಾತಿಯಲ್ಲಿ ಕಾಲ್ತುಳಿತ: ಓರ್ವ ಸಾವು

Update: 2018-01-10 22:23 IST

ಪಾಟ್ನಾ, ಜ. 10: ಬಿಹಾರದ ರೋಹ್ಟಕ್ ಜಿಲ್ಲೆಯ ದೆಹ್ರಿ ಆನ್ ಸೋನೆಯಲ್ಲಿ ಸೇನಾ ನೇಮಕಾತಿ ಸಂದರ್ಭ ನಡೆದ ಕಾಲ್ತುಳಿತದಲ್ಲಿ ಓರ್ವ ಮೃತಪಟ್ಟು ಐವರು ಗಾಯಗೊಂಡಿದ್ದಾರೆ.

ಸೇನಾ ನೇಮಕಾತಿಯ 5ನೇ ದಿನವಾದ ಬುಧವಾರ 3 ಗಂಟೆಗೆ ಓಟದಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳು ಪೊಲೀಸ್ ಲೈನ್‌ನ ಗೇಟ್ ಮೂಲಕ ಬಿಎಂಪಿ ಮೈದಾನಕ್ಕೆ ಧಾವಿಸಿದಾಗ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧೀಕ್ಷಕ ಎಂ.ಎಸ್. ದಿಲ್ಲಾನ್ ತಿಳಿಸಿದ್ದಾರೆ.

ಮೃತಪಟ್ಟ ಯುವಕನನ್ನು ಗಯಾ ಜಿಲ್ಲೆಯ ಮುಖೇಶ್ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಮಲೇಶ್ ಕುಮಾರ್, ದೇವವ್ರತ ಕುಮಾರ್, ಶ್ಯಾಮ್‌ನಂದನ್ ಕುಮಾರ್ ವರ್ಮಾ, ದರ್ಮೇಂದ್ರ ಕುಮಾರ್ ಹಾಗೂ ಮನೀಶ್ ಕುಮಾರ್ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News