ಸಂಶಯ ನಿವಾರಿಸಿ

Update: 2018-01-12 18:00 GMT

ಮಾನ್ಯರೇ,

ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ವಿವಿಧ ಬ್ಯಾಂಕ್‌ಗಳು ಹತ್ತು ರೂಪಾಯಿ ನಾಣ್ಯವನ್ನು ಎಲ್ಲಾ ಕಡೆ ಬಳಸಬಹುದೆಂದು ಹೇಳಿ ತಿಂಗಳುಗಳೇ ಕಳೆಯಿತು. ಆದರೆ ಇನ್ನೂ ಈ ಕುರಿತಾದ ಗೊಂದಲ, ಸಂಶಯ ನಿವಾರಣೆಯಾಗಿಲ್ಲ. ಇದೊಂದು ತರಹ ಸಮಸ್ಯೆಯ ರೂಪ ಪಡೆದಿದೆ. ಈ ಸಮಸ್ಯೆ ಹೆಚ್ಚು ಎದುರಾಗಿರುವುದು ಮಧ್ಯಮ ಹಾಗೂ ಬಡವರಿಗೆ, ನಿರ್ಗತಿಕರಿಗೆ.

ಹೊಟೇಲ್, ಮಾರುಕಟ್ಟೆ, ಆಟೋ, ಕಿರಾಣಿ ಅಂಗಡಿಯಲ್ಲಿ ಈ ಹತ್ತು ರೂಪಾಯಿ ನಾಣ್ಯವನ್ನು ಸಂಶಯದ ರೂಪದಲ್ಲಿ ನೋಡಲಾಗುತ್ತಿದೆ. ಜೊತೆಗೆ ನಾಣ್ಯ ನೀಡಿದ ವ್ಯಕ್ತಿಯನ್ನ್ನು ಸಹ..! ಹೆಚ್ಚಿನ ಕಡೆ ಈ ನಾಣ್ಯ ಚಲಾವಣೆಯಲ್ಲಿಲ್ಲ ಎಂದು ಸಾಗ ಹಾಕುತ್ತಾರೆ. 2016ರ ನವೆಂಬರ್‌ನಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ನಂತರ ಬ್ಯಾಂಕ್‌ಗಳು ನೋಟುಗಳ ಬದಲಿಗೆ ನಾಣ್ಯಗಳನ್ನು ವಿತರಿಸಿದ್ದವು. ಅಂದಿನಿಂದ ಈ ನಾಣ್ಯಗಳ ಚಲಾವಣೆ ಸಮಸ್ಯೆ ಶುರುವಾಗಿದೆ. ಇದು ಮತ್ತಷ್ಟು ಕಿರಿಕಿರಿಯನ್ನುಂಟು ಮಾಡುತ್ತಿದೆ. ಕೂಡಲೇ ವ್ಯಾಪಾರಿಗಳ ಗೋಳು, ಗ್ರಾಹಕರ ಅಳಲಿಗೆ ಪರಿಹಾರ ನೀಡಬೇಕಾಗಿದೆ.

-ಶಂಶೀರ್ ಬುಡೋಳಿ, ಬಂಟ್ವಾಳ

Writer - -ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - -ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News