ಜ.15: ಶಂಸುಲ್ ಉಲಮಾ ಸೋಶಿಯಲ್ ಟ್ರಸ್ಟ್‌ನಿಂದ ಅಂಬ್ಯುಲೆನ್ಸ್ ಸಮರ್ಪಣೆ, ಏಕದಿನ ಮತ ಪ್ರಭಾಷಣ

Update: 2018-01-13 12:22 GMT

ಪುತ್ತೂರು, ಜ. 13: ಅನಾಹುತ, ಅಫಘಾತಗಳ ಸಂದರ್ಭ ಸಾರ್ವಜನಿಕ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಪುತ್ತೂರಿನ ಶಂಸುಲ್ ಉಲಮಾ ಸೋಶಿಯಲ್ ಟ್ರಸ್ಟ್‌ನ ವತಿಯಿಂದ ಆಂಬ್ಯುಲೆನ್ಸ್ ಸೇವೆ ಆರಂಭಿಸಲು ಉದ್ದೇಶಿಸಲಾಗಿದ್ದು, ಆಂಬ್ಯುಲೆನ್ಸ್ ಸಮರ್ಪಣೆ ಮತ್ತು ಏಕದಿನ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮ ಜ.15ರಂದು ಸಂಜೆ ಪುತ್ತೂರು ನಗರದ ಹೊರವಲಯದ ಮೊಟ್ಟೆತ್ತಡ್ಕ ಹೆಲಿಪ್ಯಾಡ್ ಮೈದಾನದಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ ತಿಳಿಸಿದ್ದಾರೆ.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಟ್ರಸ್ಟ್‌ನ ವತಿಯಿಂದ ಮರ್‌ಹೂಂ ಶೈಖುನಾ ಶಂಸುಲ್ ಉಲಮಾ ಅವರ ಹೆಸರಿನಲ್ಲಿ ಪುತ್ತೂರಿನ ನಿರ್ಗತಿಕ ಬಡ ರೋಗಿಗಳಿಗೆ ಸಹಾಯಧನ ನೀಡುತ್ತಾ ಬರಲಾಗಿದೆ. ಅನಾಹುತ ,ಅಫಘಾತಗಳ ಸಂದರ್ಭದಲ್ಲಿ ತೀರಾ ತೊಂದರೆಗೊಳಗಾಗುವ ಬಡ, ನಿರ್ಗತಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಇದೀಗ ಆಂಬ್ಯುಲೆನ್ಸ್ ಸೇವೆ ಆರಂಭಿಸಲು ಉದ್ದೇಶಿಸಲಾಗಿದೆ. ಆರ್ಥಿಕ ಮಟ್ಟವನ್ನು ನೋಡಿಕೊಂಡು ತೀರಾ ಬಡವರಾದಲ್ಲಿ ಉಚಿತ ಸೇವೆ ನೀಡಲಾಗುವುದು. ಜಾತಿ, ಮತ, ಬೇಧವಿಲ್ಲದೆ ಸಾರ್ವಜನಿಕರೆಲ್ಲರಿಗೂ ಈ ಸೇವೆ ನೀಡಲಾಗುವುದು ಎಂದು ತಿಳಿಸಿದರು.

ಆಂಬ್ಯುಲೆನ್ಸ್ ಸೇವೆಯ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಸಮಸ್ತದ ಅಧ್ಯಕ್ಷ ಶೈಖುನಾ ಅಸಯ್ಯದ್ ಜಿಫ್ರಿ ಮುತ್ತು ಕೋಯ ತಂಙಳ್ ದುವಾಃಶೀರ್ವಚನ ನೀಡಲಿದ್ದಾರೆ. ದ.ಕ.ಜಿಲ್ಲೆಯ ಎಲ್ಲಾ ಸಮಸ್ತ ಪೋಷಕ ಸಂಘಟನೆಗಳ ಒಕ್ಕೂಟದ ಸಹಕಾರದೊಂದಿಗೆ ನಡೆಯುವ ಏಕದಿನ ಧಾರ್ಮಿಕ ಮತ ಪ್ರವಚನದಲ್ಲಿ ಹೆಸರಾಂತ ವಾಗ್ಮಿ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು, ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖ ಅಹಮ್ಮದ್ ಮುಸ್ಲಿಯಾರ್, ಪುತ್ತೂರು ಜಂಇಯತ್ತುಲ್ ಉಲೇಮಾದ ಅಧ್ಯಕ್ಷ ಶೈಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಚಿವ ಯು.ಟಿ.ಖಾದರ್, ಶಾಸಕ ಮೊಯ್ದಿನ್ ಬಾವ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ಶಂಸುಲ್ ಉಲಮಾ ಸೋಶಿಯಲ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಂ.ಅಬೂಬಕರ್ ಮುಲಾರ್, ಕೋಶಾಧಿಕಾರಿ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ. ಟ್ರಸ್ಟ್‌ನ ಸಲಹೆಗಾರರಾದ ಪುತ್ತೂರು ಜಂಇಯತ್ತುಲ್ ಉಲಮಾದ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ಮತ್ತು ಕೂರ್ನಡ್ಕ ವಲಯ ಜಂಇಯತ್ತುಲ್ ಮುಹಲ್ಲಿಮೀನ್ ಅಧ್ಯಕ್ಷ ಪಿ.ಎಂ.ಉಮ್ಮರ್ ಫೈಝಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News