ಉಡುಪಿ: ಪಶು ಭಾಗ್ಯ ಫಲಾನುಭವಿಗಳಿಗೆ ಸೂಚನೆ

Update: 2018-01-13 13:24 GMT

ಉಡುಪಿ, ಜ.13: ಪಶುಭಾಗ್ಯ ಆರ್.ಕೆ.ವಿ.ವೈ ಯೋಜನೆಯಡಿ ಹೈನುಗಾರಿಕಾ ಘಟಕ ಅನುಷ್ಠಾನಕ್ಕಾಗಿ ವಿಶೇಷ ಘಟಕ ಯೋಜನೆಯಡಿ 11 ಮತ್ತು ಗಿರಿಜನ ಉಪಯೋಜನೆಯಡಿ 9 ಫಲಾನುಭವಿಗಳಿಗೆ ಹೆಚ್ಚುವರಿಯಾಗಿ ಸವಲತ್ತು ವಿತರಿಸುವ ಯೋಜನೆಯಿದ್ದು, ಆಸಕ್ತ ಫಲಾನುಭವಿಗಳು ಜ.19 ರೊಳಗೆ ಸಮೀಪದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಪ್ರತಿ ಘಟಕ ವೆಚ್ಚ 1,20,000 ರೂ.ಗಳಲ್ಲಿ 60,000 ರೂ. ಸಹಾಯಧನ ಮತ್ತು 60,000 ಬ್ಯಾಂಕ್ ಸಾಲ ಪಡೆದು ಘಟಕ ಅನುಷ್ಟಾನಗೊಳಿಸ ಬೇಕಾಗಿದೆ. ಹಾಗೂ ಭೂಸಮೃದ್ಧಿ ಯೋಜನೆಯ ಸಮಗ್ರ ಕೃಷಿ ಪದ್ದತಿ ಅಳವಡಿಕೆ ಯೋಜನೆಯಡಿ ವಿವಿಧ ಹೈನುಗಾರಿಕಾ, ಮೇವು ಬೆಳೆ, ಗಿರಿರಾಜ ಕೋಳಿ ಘಟಕಗಳ ಅನುಷ್ಟಾನಕ್ಕೆ ಜಿಲ್ಲೆಯ ಬ್ರಹ್ಮಾವರ, ವಂಡ್ಸೆ, ಬೈಂದೂರು, ಅಜೆಕಾರು ಹೋಬಳಿ ವ್ಯಾಪ್ತಿಯ ಆಸಕ್ತ ಫಲಾನುಭವಿಗಳು ಜ.19ರೊಳಗೆ ಸಮೀಪದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಿ ಅರ್ಜಿ ನೀಡಬಹುದು ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News