ಉಡುಪಿ: ನೆತಾನ್ಯಾಹು ಭಾರತ ಭೇಟಿ ವಿರೋಧಿಸಿ ಮತ ಪ್ರದರ್ಶನ

Update: 2018-01-13 14:48 GMT

ಉಡುಪಿ, ಜ.13: ಇಸ್ರೇಲ್ ದೇಶದ ಪ್ರಧಾನ ಮಂತ್ರಿ ಬೆಂಜಮಿನ್ ನೇತಾನ್ಯಾಹು ಅವರ ಜ.14ರ ಭಾರತ ಭೇಟಿಯನ್ನು ವಿರೋಧಿಸಿ ಎಸ್‌ಐಒ ಉಡುಪಿ ಘಟಕವು ಶುಕ್ರವಾರ ಉಡುಪಿ ಮಸೀದಿ ಆವರಣದಲ್ಲಿ ಮತ ಪ್ರದರ್ಶನ ನಡೆಸಿತು.

‘ಭಾರತೀಯರು ಬೆಂಜಮಿನ್ ನೆತಾನ್ಯಾಹುರನ್ನು ಭಾರತದಲ್ಲಿ ಸ್ವಾಗತಿಸುದಿಲ್ಲ’, ‘ಯುದ್ಧ ಅಪರಾಧಿಗಳಿಗೆ ಭಾರತದಲ್ಲಿ ಪ್ರವೇಶವಿಲ್ಲ’ ಎಂಬ ಬರಹಗಳ ಭಿತ್ತಿಪತ್ರಗಳನ್ನು ಹಿಡಿದು ಪ್ರದರ್ಶಿಸುವ ಮೂಲಕ ನೆತಾನ್ಯಾಹು ಭಾರತ ಭೇಟಿ ಯನ್ನು ತೀವ್ರವಾಗಿ ವಿರೋಧಿಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಐಒ ಜಿಲ್ಲಾಧ್ಯಕ್ಷ ಯಾಸೀನ್ ಕೋಡಿಬೆಂಗ್ರೆ, ಕಾರ್ಯದರ್ಶಿ ಅಫ್ವಾನ್ ಹೂಡೆ, ಉಸ್ತಾದ್ ಫೈಸಲ್ ಮಲ್ಪೆ, ಉಡುಪಿ ಘಟಕಾಧ್ಯಕ್ಷ ಫಾಝಿಲ್, ಯಹ್ಯಾ ಅಸ್ಸಾದಿ, ಶಾರೂಕ್ ತೀರ್ಥಹಳ್ಳಿ, ಮಲ್ಪೆ ಘಟಕಾಧ್ಯಕ್ಷ ಇಮ್ರಾನ್ ಮಲ್ಪೆ, ಬಿಲಾಲ್ ಮಲ್ಪೆ, ವಾಸೀಮ್ ಉಸ್ತಾದ್, ಸಲಾಹುದ್ದೀನ್ ಹೂಡೆ, ಅಲ್ಫಾಝ್ ಮಲ್ಪೆ, ಫರಾನ್ ಉಡುಪಿ, ಅಕೀಬ್ ನೇಜಾರ್, ಬಿಲಾಲ್ ಅಸ್ಸಾದಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News