ನಟನೆ- ಹಾಡುಗಾರಿಕೆಯೆರಡೂ ಕಷ್ಟವಲ್ಲ: ಮಂಗಳೂರಿನಲ್ಲಿ ಫರ್ಹಾನ್ ಅಖ್ತರ್

Update: 2018-01-13 17:47 GMT

ಮಂಗಳೂರು, ಜ.13: ಕಲಾವಿದನೊಬ್ಬನಿಗೆ ನಟನೆ ಹಾಗೂ ಹಾಡುಗಾರಿಕೆ ಜತೆಯಾಗಿಸಿಕೊಂಡು ಸಾಗುವುದು ಕಷ್ಟವಲ್ಲ. ಆದರೆ ಉತ್ತಮ ವೇದಿಕೆ ದೊರೆಯುವುದು ಬಹು ಮುಖ್ಯ ಎಂದು ನಟ, ಹಾಡುಗಾರ, ನಿರ್ದೇಶಕ ಫರ್ಹಾನ್ ಅಖ್ತರ್ ಅಭಿಪ್ರಾಯಿಸಿದ್ದಾರೆ.

ಇಂಪಿರೀಯಲ್ ಬ್ಲೂ ಸೂಪರ್‌ಹಿಟ್ ನೈಟ್ಸ್ ಸೀಸನ್ 4ರಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ನಗರದ ಖಾಸಗಿ ಹೊಟೇಲೊಂದ ರಲ್ಲಿ ಪತ್ರಕರ್ತರೊಂದಿಗೆ ಅವರು ತಮ್ಮ ಅನುಭವ ಹಂಚಿಕೊಂಡರು.

ನಟನೆ ಹಾಗೂ ಹಾಡುಗಾರಿಕೆ ಎರಡು ವಿಭಿನ್ನ ಅನುಭವವನ್ನು ನೀಡುತ್ತದೆ. ಜೀವನದಲ್ಲಿ ಉತ್ತಮ ಅನುಭವಗಳನ್ನು ಪಡೆದುಕೊಳ್ಳುವುದು ನಮ್ಮನ್ನು ಸರಿ ದಾರಿಯಲ್ಲಿ ಕೊಂಡೊಯ್ಯಲು ಸಹಕಾರಿಯಾಗುತ್ತದೆ. ಕಲಾವಿದನಿಗೆ ಉತ್ತಮ ವೇದಿಕೆ ದೊರಕಿದಾಗ ಅದನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಮುಂದೆ ಸಾಗುವುದು ಉದಯೋನ್ಮುಖ ನಟ ಹಾಗೂ ಹಾಡುಗಾರನ ಕರ್ತವ್ಯ ಎಂದು ಅವರು ಹೇಳಿದರು.

ಮೂರು ವರ್ಷಗಳ ಹಿಂದೆ ಮಣಿಪಾಲ ವಿಶ್ವವಿದ್ಯಾನಿಲಯದ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದೆ. ಮಂಗಳೂರಿಗೆ ಬರಲು ಬಹಳ ಸಂತೋಷ ವಾಗುತ್ತದೆ. ಪ್ರಸ್ತುತ ಗೋಲ್ಡ್ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದೇನೆ. ಆ ಕೆಲಸ ಹಾಗೂ ಹಾಡುಗಾರಿಕೆಯಲ್ಲಿ ನಾನು ಬ್ಯುಸಿಯಾಗಿದ್ದೇನೆ ಎಂದವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News