ಸಿಆರ್‌ಪಿಎಫ್ ಕೇಂದ್ರ ಕಚೇರಿ ಮೇಲೆ ದಾಳಿಗೆ ಉಗ್ರರ ಯೋಜನೆ: ಪೊಲೀಸರಿಂದ ಕಟ್ಟೆಚ್ಚರ
Update: 2018-01-14 21:49 IST
ಹೊಸದಿಲ್ಲಿ, ಜ. 14: ಜಮ್ಮುವಿನಲ್ಲಿರುವ ಸಿಆರ್‌ಪಿಎಫ್ ಕೇಂದ್ರ ಕಚೇರಿ ಹಾಗೂ ಇತರ ಭದ್ರತಾ ಕಚೇರಿಗಳನ್ನು ಗುರಿಯಾಗಿರಿಸಿ ಪಾಕಿಸ್ತಾನ ಮೂಲದ ಜೈಶೆ ಆತ್ಮಾಹುತಿ ದಾಳಿ ನಡೆಸಲು ಯೋಜನೆ ರೂಪಿಸಿದೆ ಎಂದು ಬೇಹುಗಾರಿಕಾ ಸಂಸ್ಥೆ ಹೇಳಿದೆ.
ಸಿಆರ್‌ಪಿಎಫ್ ಶಿಬಿರಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇರುವ ಬಗ್ಗೆ ಮಾಹಿತಿ ಪಡೆದ ಬಳಿಕ ಪೊಲೀಸರು ಜಮ್ಮುವಿನಲ್ಲಿ ಭದ್ರತೆ ಬಿಗಿಗೊಳಿಸಿದ್ದಾರೆ.
ಸಿಆರ್‌ಪಿಎಫ್ ಶಿಬಿರ ಸೇರಿದಂತೆ ಇತರ ರಕ್ಷಣಾ ಕೇಂದ್ರಗಳ ಮೇಲೆ ಆತ್ಮಾಹುತಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಎರಡು ದೂರವಾಣಿ ಕರೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದಾರೆ.
ಶಂಕಿತ ಭಯೋತ್ಪಾದಕರ ಹಾಗೂ ತಳಮಟ್ಟದ ಕಾರ್ಯಕರ್ತರ ನಾಲ್ಕು ಮೊಬೈಲ್ ಫೋನ್‌ಗಳ ಬಗ್ಗೆ ನಿಗಾ ಇರಿಸಲಾಗಿದೆ. ಅವರ ಕರೆ ವಿವರಗಳ ದಾಖಲೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.