ಪೆರುವಿನಲ್ಲಿ ಪ್ರಬಲ ಭೂಕಂಪ

Update: 2018-01-14 17:18 GMT

ಲಿಮಾ,ಜ.13: ದಕ್ಷಿಣ ಅಮೆರಿಕ ರಾಷ್ಟ್ರವಾದ ಪೆರುದೇಶದ ಪೂರ್ವ ಕರಾವಳಿಯಲ್ಲಿ ರವಿವಾರ ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದ್ದು, ದೇಶದ ವಿವಿಧ ಭಾಗಗಳಲ್ಲಿ ಹಾಗೂ ನೆರೆಯ ರಾಷ್ಟ್ರವಾದ ಚಿಲಿಯಲ್ಲಿ ಸುನಾಮಿ ಅಪ್ಪಳಿಸುವ ಕುರಿತು ಮುನ್ನೆಚ್ಚರಿಕೆ ನೀಡಲಾಗಿದೆ.

 ಭೂಕಂಪವು ರವಿವಾರ ಮುಂಜಾನೆ 4:18 ಗಂಟೆಗೆ ಸಂಭವಿಸಿದ್ದು, ಅದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.3ರಷ್ಟಿತ್ತೆಂದು ಅಮೆರಿಕದ ಭೌಗೋಳಿಕ ಸರ್ವೇಕ್ಷಣಾ ಸಂಸ್ಥೆ ತಿಳಿಸಿದೆ. ಭೂಕಂಪದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಅದು ಹೇಳಿದೆ. ಭೂಕಂಪದಿಂದಾಗಿ ಹಲವಾರು ನಗರಗಳು, ಪಟ್ಟಣಗಳಲ್ಲಿ ವಿದ್ಯುತ್ ಸಂಪರ್ಕ ಕಡಿದುಹೋಗಿರುವುದಾಗಿ ಮೂಲಗಳು ತಿಳಿಸಿವೆ,.

 ದಕ್ಷಿಣ ಪೆರುವಿನ ನೈಋತ್ಯ ಭಾಗದ ಅಕಾರಿ ನಗರದಿಂದ 42 ಕಿ.ಮೀ. ದೂರದ ಸಾಗರ ಪ್ರದೇಶದಲ್ಲಿ 12.1 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತೆಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಈ ಮಧ್ಯೆ ಭೂಕಂಪದಿಂದಾಗಿ ಪೆರು ದೇಶದ ಕೆಲವು ಭಾಗಗಳಲ್ಲಿ ಅಪಾಯಕಾರಿಯಾದ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದೆಯೆಂದು ಪೆಸಿಫಿಕ್ ಸುನಾಮಿ ಮುನ್ನೆಚ್ಚರಿಕೆ ಕೇಂದ್ರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News