×
Ad

ಬಾಂಗ್ಲಾದೇಶಕ್ಕೆ ಸುಲಭ ಗೆಲುವು

Update: 2018-01-15 23:57 IST

ಢಾಕಾ, ಜ.15: ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಸಿಡಿಸಿದ ಅಜೇಯ ಅರ್ಧಶತಕದ ಕೊಡುಗೆ ನೆರವಿನಿಂದ ಬಾಂಗ್ಲಾದೇಶ ತಂಡ ಸೋಮವಾರ ನಡೆದ ತ್ರಿಕೋನ ಏಕದಿನ ಅಂತಾರಾಷ್ಟ್ರೀಯ ಟೂರ್ನಮೆಂಟ್‌ನಲ್ಲಿ ಝಿಂಬಾಬ್ವೆ ವಿರುದ್ಧ 8 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದೆ.

ಶೇರ್-ಇ-ಬಾಂಗ್ಲಾ ನ್ಯಾಶನಲ್ ಸ್ಟೇಡಿಯಂನಲ್ಲಿ ಇಕ್ಬಾಲ್(ಔಟಾಗದೆ 84, 93 ಎಸೆತ,8 ಬೌಂಡರಿ, 1 ಸಿಕ್ಸರ್)ಅರ್ಧಶತಕದ ಸಹಾಯದಿಂದ ಆತಿಥೇಯ ಬಾಂಗ್ಲಾ ಕೇವಲ 28.3 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿತು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಝಿಂಬಾಬ್ವೆ ತಂಡ ಎಡಗೈ ಸ್ಪಿನ್ನರ್ ಶಾಕಿಬ್ ಅಲ್ ಹಸನ್(3-43) ದಾಳಿಗೆ ತತ್ತರಿಸಿ 49 ಓವರ್‌ಗಳಲ್ಲಿ 170 ರನ್‌ಗೆ ಆಲೌಟಾಗಿತ್ತು. ಸಿಕಂದರ್ ರಝಾ(52) ಅಗ್ರ ಸ್ಕೋರರ್ ಎನಿಸಿಕೊಂಡರಲ್ಲದೆ 53 ರನ್‌ಗೆ 2 ವಿಕೆಟ್ ಕಬಳಿಸಿದ್ದರು.

ಸತತ ಎಸೆತಗಳಲ್ಲಿ ಎರಡು ವಿಕೆಟ್‌ಗಳನ್ನು ಉರುಳಿಸಿದ ರುಬೆಲ್ ಹುಸೈನ್(2-24) ಝಿಂಬಾಬ್ವೆ ಕುಸಿತಕ್ಕೆ ಕಾರಣರಾದರು. ಮಾತ್ರವಲ್ಲ 100 ವಿಕೆಟ್ ಪೂರೈಸಿದ ಬಾಂಗ್ಲಾದ 5ನೇ ಬೌಲರ್ ಎನಿಸಿಕೊಂಡರು.

ಝಿಂಬಾಬ್ವೆ ಬುಧವಾರ ತನ್ನ 2ನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News