ಜ. 20 ರಂದು ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2018-01-16 11:27 GMT

ಬೆಳ್ತಂಗಡಿ,ಜ.16: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಆರೋಗ್ಯ ಸಮಿತಿ, ಯುವ ಬಿಲ್ಲವ ವೇದಿಕೆ, ಯುವವಾಹಿನಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಕೆ.ಎಂ.ಸಿ.ಆತ್ತಾವರ ಮಂಗಳೂರು, ಕಸ್ತೂರ್ಬಾ ದಂತ ಮಹಾವಿದ್ಯಾಲಯ, ಕೆ.ಎಂ.ಸಿ. ಮಂಗಳೂರು ಇವರ ಸಹಯೋಗದೊಂದಿಗೆ ಜ. 20 ರಂದು ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಶ್ರೀಗು.ನಾ.ಸ್ವಾ.ಸೇ.ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ ತಿಳಿಸಿದರು.

ಅವರು, ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಶಿಬಿರದ ಬಗ್ಗೆ ವಿವರ ನೀಡಿದರು.ಇಲ್ಲಿನ ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘದ ಆಶಾ ಸಾಲಿಯಾನ್ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 9-30ರಿಂದ ನಡೆಯುವ ಶಿಬಿರವನ್ನು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಉದ್ಘಾಟಿಸಲಿದ್ದಾರೆ. 

ಡಾ.ಜಗನ್ನಾಥ ಎಂ., ನಾಟಿ ವೈದ್ಯ ಬೇಬಿ ಪೂಜಾರಿ ಪುಣ್ಕೆತ್ಯಾರು, ನ.ಪಂ.ಅಧ್ಯಕ್ಷ ಮುಗುಳಿ ನಾರಾಯಣರಾವ್, ಕೆ.ಎಂ.ಸಿಯ ವೈದ್ಯಾಧಿಕಾರಿಗಳು ಅತಿಥಿಗಳಾಗಿರುತ್ತಾರೆ. ಶಿಬಿರದಲ್ಲಿ ದಂತವೈದ್ಯರು, ವೈದ್ಯಕೀಯ ತಪಾಸಣೆ, ಮಕ್ಕಳ ತಜ್ಞರು, ಕಣ್ಣಿನ ತಜ್ಞರು, ಚರ್ಮರೋಗ ತಜ್ಞರು, ಎಲುಬು ತಜ್ಞರು, ಕಿವಿ, ಮೂಗು, ಗಂಟಲು, ಸ್ತ್ರೀರೋಗ ತಜ್ಞರು ಇರಲಿದ್ದಾರೆ. ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ.  ಶಸ್ತ್ರಚಿಕಿತ್ಸೆಗೆ ಬಡರೋಗಿಗಳಿಗೆ ಆಸ್ಪತ್ರೆಯ ಹಸಿರು ಕಾರ್ಡ್ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9449415477 / 08256-234099 ಗೆ ಸಂಪರ್ಕಿಸಬಹುದು ಎಂದರು. 
ಗೋಷ್ಠಿಯಲ್ಲಿ ಪ್ರಧಾನ ಸಂಚಾಲಕ ಅಭಿನಂದನ್ ಹರೀಶ್‍ಕುಮಾರ್, ಸಂಚಾಲಕರಾದ ಸೂರ್ಯನಾರಾಯಣಡಿ.ಕೆ., ಸಚಿನ್‍ಕುಮಾರ್ ನೂಜೋಡಿಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News