ಕಾಂಗ್ರೆಸ್ ನಾಯಕ ರಾಮ ಶಂಕರ್ ಶುಕ್ಲಾ ವಿರುದ್ಧ ಎಫ್‌ಐಆರ್
Update: 2018-01-16 20:45 IST
ಅಮೇಥಿ, ಜ. 16: ಉತ್ತರಪ್ರದೇಶದ ಅಮೇಥಿ ಜಿಲ್ಲೆಯಲ್ಲಿ ಕಂಡು ಬಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಮ ಹಾಗೂ ಪ್ರಧಾನಿ ನರೇಂದ್ರ ಮೋದಿ ರಾವಣನಾಗಿ ಚಿತ್ರಿಸಿದ ಭಿತ್ತಿಪತ್ರ ಕುರಿತಂತೆ ಕಾಂಗ್ರೆಸ್ ನಾಯಕ ರಾಮ ಶಂಕರ್ ಶುಕ್ಲಾ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ.
ಬಿಜೆಪಿಯ ನಾಯಕ ಸೂರ್ಯ ಪ್ರಕಾಶ್ ತೀವಾರಿ ಅವರು ಶುಕ್ಲಾ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ.
ರಾಹುಲ್ ಗಾಂಧಿ ನಗರಕ್ಕೆ ಭೇಟಿ ನೀಡಲಿರುವ ದಿನದ ಮುಂಚೆ ಡಿಸೆಂಬರ್ 14ರಂದು ಗುರಿಗಂಜ್ ರೈಲು ನಿಲ್ದಾಣದಲ್ಲಿ ಈ ಭಿತ್ತಿಪತ್ರ ಅಂಟಿಸಲಾಗಿತ್ತು. ಭಿತ್ತಿಪತ್ರದಲ್ಲಿ ಬಿಲ್ಲು ಹಿಡಿದ ರಾಹುಲ್ ಗಾಂಧಿ ಬಾಣವನ್ನು ಪ್ರಧಾನಿ ನರೇಂದ್ರ ಮೋದಿಯತ್ತ ಗುರಿ ಹಿಡಿದಂತೆ ಚಿತ್ರಿಸಲಾಗಿತ್ತು.