×
Ad

ಸ್ಟೆಲ್ಲಾರ್‌ನಿಂದ 4 ಲಕ್ಷ ಡಾಲರ್ ಕ್ರಿಪ್ಟೊಕರೆನ್ಸಿ ಕಳವು

Update: 2018-01-16 20:51 IST

ಹೊಸದಿಲ್ಲಿ, ಜ. 16: ಡಿಜಿಟಲ್ ವಾಲೆಟ್ ಪೂರೈಕೆದಾರರಾಗಿರುವ ಬ್ಲ್ಯಾಕ್ ವಾಲೆಟ್‌ನ್ನು ಹ್ಯಾಕರ್‌ಗಳು ಭೇದಿಸಿದ್ದಾರೆ ಹಾಗೂ ಅದರಲ್ಲಿದ್ದ 400,000 ಡಾಲರ್ ಮೌಲ್ಯದ ‘ಸ್ಟೆಲ್ಲಾರ್’ ಕ್ರಿಪ್ಟೋಕರೆನ್ಸಿಯನ್ನು ದೋಚಿದ್ದಾರೆ.

ಬ್ಲ್ಯಾಕ್ ವಾಲೆಟ್‌ನ ಸರ್ವರ್ ಅನ್ನು ಅಪರಿಚಿತ ಗುಂಪು ಹೈಜಾಕ್ ಮಾಡಿದೆ ಹಾಗೂ ಡಿಜಿಟಲ್ ಕರೆನ್ಸಿಗೆ ಕನ್ನ ಹಾಕಿದೆ.

ಬ್ಲ್ಯಾಕ್ ವಾಲೆಟ್ ಡಿಜಿಟಲ್ ಕರೆನ್ಸಿಗೆ ಕನ್ನ ಹಾಕುವ ಬಗ್ಗೆ ಬಳಕೆದಾರರಿಗೆ ಎಚ್ಚರಿಸಲು ಪ್ರಯತ್ನಿಸಿದೆ. ಆದಾಗ್ಯೂ, ಹಲವು ಬಳಕೆದಾರರು ನಿರಂತರ ಲಾಗ್ ಆಗಿ ಹಣ ಕಳೆದುಕೊಂಡಿದ್ದಾರೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News