ಕರ್ನಾಟಕ ಆಹಾರ ಇಲಾಖೆಗೆ 'ಸಕ್ಷಂ-2018'ನಲ್ಲಿ ಪ್ರಶಸ್ತಿ

Update: 2018-01-17 04:07 GMT

ಹೊಸದಿಲ್ಲಿ, ಜ.17: ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಕೇಂದ್ರ ಸರಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯ ಪೆಟ್ರೋಲಿಯಂ ಕನ್ಸರ್ವೇಶನ್ ರಿಸರ್ಚ್ ಸೆಂಟರ್ (ಪಿ.ಸಿ.ಆರ್.ಎ.) ಸಂಸ್ಥೆಯ ವತಿಯಿಂದ ಘೋಷಣೆಯಾಗಿದ್ದ "ಸಮಗ್ರ ಸರ್ವಶ್ರೇಷ್ಠ ಕಾರ್ಯನಿರ್ವಹಣೆ" (ಬೆಸ್ಟ್ ಓವರಾಲ್ ಪರ್ಫರ್ಮೆನ್ಸ್) ಪ್ರಶಸ್ತಿಯನ್ನು ಮಂಗಳವಾರ ಪ್ರದಾನ ಮಾಡಲಾಯಿತು.

ಹೊಸದಿಲ್ಲಿಯಲ್ಲಿ ನಡೆದ ಸಂಕರ್ಷಣ್ ಕ್ಷಮತಾ ಮಹೋತ್ಸವ್ (ಸಕ್ಷಂ)-2018 ಸಮಾರಂಭದಲ್ಲಿ ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ.ಹರ್ಷವರ್ಧನ್ ಉಪಸ್ಥಿತಿಯಲ್ಲಿ ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಉತ್ತಮ ಆರೋಗ್ಯ ಮತ್ತು ಪರಿಸರಕ್ಕಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಅರ್ಥಪೂರ್ಣ ಬಳಕೆ ಮಾಡಿರುವುದಕ್ಕಾಗಿ ಯು.ಟಿ.ಖಾದರ್ ಸಚಿವರಾಗಿರುವ ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಈ ಪ್ರಶಸ್ತಿ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News