ಬಂಟ್ವಾಳ: ದಾರಿಮೀಸ್‌ನಿಂದ ಜಿಲ್ಲಾ ಮಟ್ಟದ ಉಲಮಾ ಸಮಾವೇಶ

Update: 2018-01-17 08:38 GMT

ಬಂಟ್ವಾಳ, ಜ.17: ಇಸ್ಲಾಂ ಧರ್ಮವು ಜನರ ಆರೋಗ್ಯದ ಬಗ್ಗೆ ಅತೀ ಹೆಚ್ಚು ಮಾರ್ಗದರ್ಶನ ನೀಡಿದ್ದು, ಇದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಾದ ಕರ್ತವ್ಯ ಉಲಮಾಗಳ ಮೇಲಿದೆ ಎಂದು ಕೇರಳದ ಖ್ಯಾತ ವಿದ್ವಾಂಸ ಡಾ.ಅಬ್ದುಲ್ ಜಲೀಲ್ ದಾರಿಮಿ ಹೇಳಿದ್ದಾರೆ.

ಜಿಲ್ಲಾ ದಾರಿಮೀಸ್ ಉಲಮಾ ಸಂಘಟನೆಯ ವತಿಯಿಂದ ಗಡಿಯಾರ ಜುಮಾ ಮಸೀದಿಯ ವಠಾರದಲ್ಲಿ ಇತ್ತೀಚೆಗೆ ಜರಗಿದ ಜಿಲ್ಲಾ ಮಟ್ಟದ ಉಲಮಾ ಸಂಗಮ ಮತ್ತು ಶಂಸುಲ್ ಉಲಮಾ ಅನುಸ್ಮರಣಾ ಸಮ್ಮೇಳನದಲ್ಲಿ ಇಸ್ಲಾಮಿನಲ್ಲಿ ಆರೋಗ್ಯ ಸಂರಕ್ಷಣೆ ಎಂಬ ವಿಷಯ ಮಂಡಿಸಿ ಅವರು ಮಾತನಾಡುತ್ತಿದ್ದರು.

ಅನಿಯಮಿತ ಆಹಾರ ಸೇವನೆಯಿಂದ ಹೆಚ್ಚಾಗಿ ಜನರ ಆರೋಗ್ಯ ಕೆಡುತ್ತಿದ್ದು, ಪಾಶ್ಚಿಮಾತ್ಯ ಆಹಾರ ಸಂಸ್ಕೃತಿಯಿಂದ ದೂರ ಸರಿದು ತಾಜಾ ಆಹಾರದ ಮೊರೆ ಹೋಗುವುದು ಇಂದಿನ ತುರ್ತು ಅಗತ್ಯವಾಗಿದೆ. ಔಷಧಿಗಳು ಕೂಡಾ ಇಂದು ರೋಗ ವಾಹಕವಾಗಿ ಕೆಲಸ ಮಾಡುತ್ತಿದ್ದು, ಪವಿತ್ರ ಕುರ್‌ಆನ್ ಹದೀಸ್ ಕಲಿಸಿಕೊಟ್ಟ ರೀತಿಯಲ್ಲಿ ದೈನಂದಿನದ ಆಹಾರ ಸೇವನೆಯಲ್ಲೂ ಇತಿಮಿತಿಗಳನ್ನು ಪಾಲಿಸಿಕೊಳ್ಳುವುದರ ಜೊತೆಗೆ ವ್ಯಾಯಾಮದಂತಹ ಪರ್ಯಾಯ ಮಾರ್ಗದ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಈ ಬಗ್ಗೆ ಉಲಮಾಗಳು ಪ್ರತಿ ಮೊಹಲ್ಲಾಗಳಲ್ಲೂ ಜಾಗೃತಿ ಮೂಡಿಸಬೇಕೆಂದು ಅವರು ಹೇಳಿದರು.

ಸಮಾರೋಪ ಸಮಾರಂದ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಕ್ಷಿಪ್ರಗತಿಯಲ್ಲಿ ಬದಲಾವಣೆಯಾಗುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಉಲಮಾಗಳು ಕಾಲದ ಬೇಡಿಕೆಗೆ ಸ್ಪಂದಿಸುವ ರೂಪದಲ್ಲಿ ಧರ್ಮ ಬೋಧನೆಯಲ್ಲಿ ನಿರತರಾಗಬೇಕು. ಸ್ವಸ್ಥ ನಾಡು ಹಾಗೂ ಸ್ವಸ್ಥ ಸಮಾಜ ರೂಪಿಸುವ ಕೆಲಸ ಮಾಡಬೇಕೆಂದು ಹೇಳಿರು.

ಅನುಸ್ಮರಣಾ ಭಾಷಣ ನಡೆಸಿದ ಸಮಸ್ತ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಖಾಝಿ ಎಂ.ಎ.ಖಾಸಿಂ ಮುಸ್ಲಿಯಾರ್ ಅವರು, ಶೈಖುನಾ ಶಂಸುಲ್ ಉಲಮಾ ಯಾವುದೇ ಸ್ಥಾನಮಾನ ಹಾಗೂ ಆಡಂಬರದ ಬದುಕನ್ನು ಇಷ್ಟಪಡದೆ, ಧರ್ಮ ಹಾಗೂ ಸಮಾಜಕ್ಕಾಗಿ ಬದುಕನ್ನೇ ಧಾರೆಯೆರೆದ ಪುಣ್ಯತ್ಮರಾಗಿದ್ದಾರೆ. ಅದೇ ಮಾದರಿಯಲ್ಲಿ ಇಂದಿನ ಉಲಮಾಗಳು ಕಾರ್ಯಪ್ರವೃತವಾಗಬೇಕು ಎಂದು ಕರೆ ನೀಡಿದರು.

ಮೌಲನಾ ಅಬ್ದುಲ್ ಅಝೀಝ್ ದಾರಿಮಿ ದಿಕ್ಸೂಚಿ ಭಾಷಣ ಮಾಡಿ, ಸಮುದಾಯದ ಮಾರ್ಗದರ್ಶಕರಾದ ಉಲಮಾಗಳು ತಮ್ಮ ಮೇಲಿನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಮುಂದೆ ಬರಬೇಕು ಎಂದರು. ರಾಜ್ಯ ದಾರಿಮೀಸ್ ಅಧ್ಯಕ್ಷ ಎಸ್.ಬಿ.ಮುಹಮ್ಮದ್ ದಾರಿಮಿ ಮಾತನಾಡಿ, ಯವ ಜನತೆ ಮಾದಕ ವ್ಯಸನಕ್ಕೆ ಬಿದ್ದು ದಾರಿ ತಪ್ಪುತ್ತಿದ್ದು, ಉಲಮಾಗಳು ಅದರ ವಿರುದ್ಧ ಪ್ರತೀ ಮೊಹಲ್ಲಾಗಳಲ್ಲೂ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.

ಸಮಸ್ತದ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು, ಆತ್ರಾಡಿ ಖಾಝಿ ಅಬೂಬಕರ್ ಹಾಜಿ, ಸೈಯದ್ ಅಮೀರ್ ತಂಙಳ್ ಕಿನ್ಯ, ಸೈಯದ್ ಝೈನುಲ್ ಆಬಿದೀನ್ ತಂಙಳ್ ಬೆಳ್ತಂಗಡಿ, ಇಬ್ರಾಹೀಂ ಬಾತಿಶ್ ತಂಙಳ್ ಆನೆಕಲ್ಲು, ತೋಡಾರ್ ಉಸ್ಮಾನುಲ್ ಫೈಝಿ, ಬಿ.ಕೆ.ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ , ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ, ಹಾರೂನ್ ಅಹ್ಸನಿ ಕೋಟೆಕ್ಕಾರ್, ಸಾಲೆತ್ತೂರ್ ಅಬೂಬಕರ್ ಫೈಝಿ, ಜಮಾಲುದ್ದೀನ್ ದಾರಿಮಿ ಗಡಿಯಾರ್, ಸಚಿವ ರಮಾನಾಥ ರೈ ಮೊದಲಾದವರು ಮಾತನಾಡಿದರು.

ಮೂಸಾ ದಾರಿಮಿ ಕಕ್ಕಿಂಜೆ, ಮಾಹಿನ್ ದಾರಿಮಿ ಪಾತೂರು, ಕೆ.ಎಸ್. ಹೈದರ್ ದಾರಿಮಿ ಅಕ್ಕರಂಗಡಿ, ಉಮರ್ ಫೈಝಿ ಸಾಲ್ಮರ, ಶರೀಫ್ ಫೈಝಿ ಕಡಬ, ಅಬ್ದುಲ್ ಮಜೀದ್ ದಾರಿಮಿ ಗುರುಪುರ, ಹನೀಫ್ ದಾರಿಮಿ ನೆಕ್ಕಿಲಾಡಿ, ಬಶೀರ್ ದಾರಿಮಿ ಕಲ್ಲೇಗ, ತಬೂಕ್ ಅಬ್ದುಲ್ ರಹಿಮಾನ್ ದಾರಿಮಿ ಕಿನ್ಯ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಜೆ.ಎ.ಅಬೂಬಕರ್ ಫೈಝಿ ಪಾಣಾಜೆ, ಇಬ್ರಾಹೀಂ ದಾರಿಮಿ ಗಡಿಯಾರ, ಅಬ್ಬಾಸ್ ದಾರಿಮಿ ಕೆಲಿಂಜ, ಇಸ್ಮಾಯೀಲ್ ದಾರಿಮಿ ನಾಳ, ಖಲೀಲುರ್ರಹ್ಮಾನ್ ದಾರಿಮಿ ಮಾರಪಳ್ಳ, ಅಬ್ದುಲ್ ರಹಿಮಾನ್ ದಾರಿಮಿ, ರೆಂಜಾಡಿ ಅಬ್ದುಲ್ ಲತೀಫ್ ದಾರಿಮಿ, ಉಸ್ಮಾನ್ ದಾರಿಮಿ ಬಂಟ್ವಾಳ, ಆದಂ ದಾರಿಮಿ ಕೊಡಾಜೆ, ಮುಹಮ್ಮದ್ ಅಲಿ ದಾರಿಮಿ ಪರ್ಲಡ್ಕ, ಝಕರಿಯಾ ದಾರಿಮಿ ಪೆರ್ನೆ, ಆದಂ ದಾರಿಮಿ ಅಜ್ಜಿಕಟ್ಟೆ, ಐ.ಮೊಯ್ದಿನಬ್ಬ ಹಾಜಿ ಮಂಗಳೂರು, ವಕ್ಫ್ ಸಲಹಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮೆಟ್ರೋ ಶಾಹುಲ್ ಹಮೀದ್, ಹಕೀಂ ಪರ್ತಿಪ್ಪಾಡಿ, ಎಲ್.ಟಿ.ಅಬ್ದುಲ್ ರಝಾಕ್ ಹಾಜಿ ಪುತ್ತೂರು, ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುಲ್ ರಶೀದ್ ಪರ್ಲಡ್ಕ, ಗಡಿಯಾರ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಅಝೀಝ್, ರಿಯಾಝ್ ಮಿಲನ್ ಗುರುಪುರ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸ್ಥಳೀಯ ಜಮಾಅತ್ ಮತ್ತು ಎಸ್ಕೆಎಸ್ಸೆಸ್ಸೆಫ್ ಘಟಕದ ವತಿಯಿಂದ ಸಮಾರಂಭಕ್ಕೆ ಆಗಮಿಸಿದ ಸಮಸ್ತದ ಉನ್ನತ ಉಲಮಾಗಳನ್ನು ಹಾಗೂ ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ನ ನೂತನ ಸದಸ್ಯರಾಗಿ ಕರ್ನಾಟಕದಿಂದ ನೇಮಕಗೊಂಡಿರುವ ಅಬ್ದುಲ್ ರಶೀದ್ ಪರ್ಲಡ್ಕ ಅವರನ್ನು ಜಿಲ್ಲಾ ದಾರಿಮೀಸ್ ವತಿಯಿಂದ ಸನ್ಮಾನಿಸಲಾಯಿತು.

ಜನವರಿ 26ರಂದು ಎಸ್ಕೆಎಸ್ಸೆಸ್ಸೆಫ್ ವತಿಯಿಂದ ನಡೆಯುವ ಮಾನವ ಸರಪಳಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮತ್ತು ಅನುಸ್ಮರಣೆ ಪ್ರಯುಕ್ತ ವೌಲಿದ್ ಮತ್ತು ಕುರ್‌ಆನ್ ಪಾರಾಯಣ ನಡೆಯಿತು.

ಕಾರ್ಯಕ್ರಮದ ಮೊದಲು ಸ್ಥಳಿಯ ಜಮಾಅತ್ ಅಧ್ಯಕ್ಷ ಅಬ್ದುಲ್ ಅಝೀಝ್ ಧ್ವಜಾರೋಹಣ ನೆರವೇರಿಸಿದರು. ದಾರಿಮೀಸ್ ಜಿಲ್ಲಾಧ್ಯಕ್ಷ ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ ಕೊಡಂಗಾಯಿ ಸ್ವಾಗತಿಸಿದರು. ಲೇಖಕ ಕೆ.ಎಂ.ಎ.ಕೊಡುಂಗಾಯಿ ಕಾರ್ಯಕ್ರಮ ನಿರೂಪಿಸಿದರು. ಫಾರೂಕ್ ದಾರಿಮಿ ಕಿನ್ಯ ವಂದಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News