ಕಲಿಕೆಯೊಂದಿಗೆ ಸಾಮಾಜಿಕ ಸೇವಾ ಪ್ರಜ್ಞೆ ಅವಶ್ಯ: ಅಬ್ದುಲ್ ರವೂಫ್ ಪುತ್ತಿಗೆ

Update: 2018-01-17 12:54 GMT

ಮಂಗಳೂರು, ಜ. 17: ಮಿಸ್ಬಾ ವಿಮೆನ್ಸ್ ಕಾಲೇಜು ಕಾಟಿಪಳ್ಳ ಇದರ ಆಶ್ರಯದಲ್ಲಿ ಹೆಣ್ಣು ಸಮಾಜದ ಕಣ್ಣು ಎಂಬ ವಿಷಯದಲ್ಲಿ ವಿಚಾರ ಸಂಕಿರಣವು ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಉದ್ಯಮಿ, ಸಮಾಜ ಸೇವಕರು ಆದ ಅಬ್ದುಲ್ ರವೂಫ್ ಪುತ್ತಿಗೆ ಹೆಣ್ಣು ಮಕ್ಕಳು ಕಲಿಕೆಯೊಂದಿಗೆ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಆಳವಡಿಸಿದಾಗ ಇಡೀ ಸಮಾಜಕ್ಕೆ ಅದರಿಂದ ಪ್ರಯೋಜನ ಸಿಗುತ್ತದೆ. ಶಾಲಾ ಪಠ್ಯದೊಂದಿಗೆ ಸಣ್ಣ ಸಣ್ಣ ಸಮಾಜ ಸೇವೆಗಳಾದ ಗಿಡ ನೆಡುವುದು, ಪರಿಸರದ ಸ್ವಚ್ಛತೆ, ಅರ್ಧದಲ್ಲಿ ಶಾಲೆ ಬಿಟ್ಟ ಮಕ್ಕಳಿಗೆ ಟ್ಯೂಶನ್ ಕೊಡುವುದು ಇತ್ಯಾದಿ ಕಾರ್ಯಗಳನ್ನು ತೊಡಗಿಸುವ ಮೂಲಕ ದೇಶಕ್ಕೆ ಕೊಡುಗೆ ನೀಡಬಹುದು” ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಝಾದ್ ಗ್ರೂಪ್‌ನ ಆಡಳಿತ ನಿರ್ದೇಶಕ ಹಾಗೂ ಸಮಾಜ ಸೇವಕರಾದ ಮನ್ಸೂರ್ ಅಹ್ಮದ್, ಹೋಮ್ ಪ್ಲಸ್‌ನ ಆಡಳಿತ ನಿರ್ದೇಶಕ ಆಸಿಫ್ ಸೂಫಿಖಾನ್ ಉಪಸ್ಥಿತರಿದ್ದರು. 

ಸಂಪನ್ಮೂಲ ವ್ಯಕ್ತಿಯಾಗಿದ್ದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸಲಹೆಗಾರ ರಫೀಕ್ ಮಾಸ್ಟರ್ ವಿಚಾರ ಸಂಕಿರಣ ನಡೆಸಿಕೊಟ್ಟರು. ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಬ್ದುಲ್ ರವೂಫ್ ಪುತ್ತಿಗೆಯವರನ್ನು ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಅಲ್ಹಾಜ್ ಬಿ.ಎಂ. ಮಮ್ತಾಝ್ ಅಲಿ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಸಂಚಾಲಕರಾದ ಬಿ.ಎ.ನಝೀರ್, ಟ್ರಸ್ಟಿಗಳಾದ ಅಬ್ದುಲ್ ಹಕೀಮ್ ಫಾಲ್ಕನ್, ಬಾವಾ ಫಕ್ರದ್ದೀನ್, ಪ್ರಾಂಶುಪಾಲೆ ಸನಾ ಹುಸೈನ್, ಆಲಿಮ್ ಪ್ರಾಧ್ಯಾಪಕರುಗಳಾದ ಹಬೀಬ್ ಸಖಾಫಿ, ಫಾರೂಖ್ ಸಖಾಫಿ, ಅಶ್ರಫ್ ಸಖಾಫಿ, ಬುಶ್ರಾ, ಕಾಲೇಜಿನ ಪ್ರಾಧ್ಯಾಪಕರುಗಳಾದ ಶಾರದಾ, ರಂಜಿತಾ, ನಾಗರತ್ನ, ಶ್ರೀಲತಾ, ಸವಿತಾ, ಅಶೂರಾ, ಹೇಮ ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಧ್ಯಾಪಕಿ ನಾಗರತ್ನ ಸ್ವಾಗತಿಸಿದರು. ಪ್ರಾಧ್ಯಾಪಕಿ ರಂಜಿತಾ ವಂದಿಸಿ, ಸಂಸ್ಥೆಯ ಪ್ರಾಂಶುಪಾಲೆ ಸನಾ ಹುಸೈನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News