×
Ad

ಸಿಬಿಎಸ್‌ಇ 12ನೆ ತರಗತಿ ಪರೀಕ್ಷೆ ವೇಳಾಪಟ್ಟಿ ಬದಲಾವಣೆ

Update: 2018-01-17 18:26 IST

ಹೊಸದಿಲ್ಲಿ, ಜ.17: ವಿದ್ಯಾರ್ಥಿಗಳು ಮತ್ತು ಶಿಕ್ಷಣತಜ್ಞರಿಂದ ಟೀಕೆಗಳು ಎದುರಾದ ಹಿನ್ನೆಲೆಯಲ್ಲಿ ಪ್ರೌಢ ಶಿಕ್ಷಣ ಕೇಂದ್ರ ಮಂಡಳಿ (ಸಿಬಿಎಸ್‌ಇ) ಯು

12ನೆ ತರಗತಿ ಪರೀಕ್ಷೆ ವೇಳಾಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಿದೆ. ಹೊಸ ವೇಳಾಪಟ್ಟಿಯ ಪ್ರಕಾರ ಸಿಬಿಎಸ್‌ಇ ಪರೀಕ್ಷೆಯು ಮಾರ್ಚ್ ಐದರಂದು ಆರಂಭವಾಗಿ ಎಪ್ರಿಲ್ 12ರಂದು ಕೊನೆಯಾಗಲಿದೆ. ಈ ಹಿಂದೆ ಕೊನೆಯ ಪರೀಕ್ಷೆಯು ಎಪ್ರಿಲ್ ಒಂಬತ್ತರಂದು ನಿಗದಿಯಾಗಿತ್ತು. ಈ ಬದಲಾವಣೆಗೆ ಆಡಳಿತಾತ್ಮಕ ಸಮಸ್ಯೆಯೇ ಕಾರಣ ಎಂದು ಸಿಬಿಎಸ್‌ಇ ತಿಳಿಸಿದೆ. ಇಂಜಿನಿಯರಿಂಗ್ ಪರೀಕ್ಷೆಗೆ ಸಂಬಂಧಪಟ್ಟಂತೆ ವಿಜ್ಞಾನ ವಿಭಾಗದ ಹಲವು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದರು. ಜಂಟಿ ಪ್ರವೇಶ ಪರೀಕ್ಷೆ 2018 (ಜೆಇಇ) ಎಪ್ರಿಲ್ ಎಂಟರಂದು ನಡೆಯಲಿದ್ದರೆ ದೈಹಿಕ ಶಿಕ್ಷಣ ಪರೀಕ್ಷೆಯು ಎಪ್ರಿಲ್ ಒಂಬತ್ತಕ್ಕೆ ನಿಗದಿಯಾಗಿತ್ತು. ಅದಲ್ಲದೆ ಭೌತಶಾಸ್ತ್ರ (ಮಾರ್ಚ್ 7) ಮತ್ತು ಇಂಗ್ಲಿಷ್ (ಮಾರ್ಚ್ 5) ಪರೀಕ್ಷೆಯ ಮಧ್ಯೆ ಕೇವಲ ಒಂದು ದಿನದ ಅಂತರವಿರುವ ಬಗ್ಗೆಯೂ ವಿದ್ಯಾರ್ಥಿಗಳು ಅಸಮಾಧಾನ ತೋಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News