×
Ad

ಹಿರಿಯ ವಿದ್ಯಾರ್ಥಿನಿಯಿಂದ 1ನೆ ತರಗತಿ ವಿದ್ಯಾರ್ಥಿಗೆ ಚೂರಿ ಇರಿತ

Update: 2018-01-17 19:01 IST

ಲಕ್ನೋ,ಜ.17: ಅಪರಿಚಿತ ವಿದ್ಯಾರ್ಥಿನಿಯೋರ್ವಳು ಚೂರಿಯಿಂದ ಇರಿದ ಪರಿಣಾಮ ಒಂದನೇ ತರಗತಿಯ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿಯ ತ್ರಿವೇಣಿ ನಗರದ ಬ್ರೈಟ್‌ಲ್ಯಾಂಡ್ ಶಾಲೆಯಲ್ಲಿ ಮಂಗಳವಾರ ನಡೆದಿದೆ.

 ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆಯ ಬಳಿಕ ಈ ಘಟನೆ ನಡೆದಿದ್ದು, ತೀವ್ರ ರಕ್ತಸ್ರಾವದೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕ ಹೃತಿಕ್‌ನನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿವಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲೆ ರೀನಾ ಮಾನಸ್ ತಿಳಿಸಿದರು.

“ಬಾಯ್ ಕಟ್ ತಲೆಗೂದಲು ಹೊಂದಿದ್ದ ‘ದೀದಿ’ಯೋರ್ವಳು ನನ್ನನ್ನು ಬಾತ್‌ರೂಮಿಗೆ ಕರೆದೊಯ್ದು ಥಳಿಸಿ,ಚೂರಿಯಿಂದ ಇರಿದಿದ್ದಳು. ನಾನು ಆಕೆಯನ್ನು ಗುರುತಿಸಬಲ್ಲೆ” ಎಂದು ಹೃತಿಕ್ ಪೊಲೀಸರಿಗೆ ತಿಳಿಸಿದ್ದಾನೆ.

ಶಾಲೆಯಲ್ಲಿ ಅಳವಡಿಸಲಾಗಿರುವ ಎಲ್ಲ ಸಿಸಿಟಿವಿ ಕ್ಯಾಮೆರಾಗಳು ಕಾರ್ಯಾಚರಿ ಸುತ್ತಿವೆ. ಆದರೆ ಬಾತ್‌ರೂಮ್ ಬಳಿ ಸಿಸಿಟಿವಿ ಕ್ಯಾಮೆರಾ ಇಲ್ಲದ್ದರಿಂದ ಆರೋಪಿ ಬಾಲಕಿಯನ್ನು ಪತ್ತೆ ಹಚ್ಚುವುದು ಕಠಿಣವಾಗಿದೆ ಎಂದು ಶಿಕ್ಷಕಿಯೋರ್ವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News