ಶಸ್ತ್ರಾಸ್ತ್ರ ಪರವಾನಿಗೆ ನಿರಾಕರಣೆಗೆ ವ್ಯಕ್ತಿಯ ಆರ್ಥಿಕ ಸ್ಥಿತಿ ಕಾರಣವಾಗುವುದಿಲ್ಲ : ಹೈಕೋರ್ಟ್

Update: 2018-01-18 12:35 GMT

ಮುಂಬೈ,ಜ.18: ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ಮುಂದಿಟ್ಟುಕೊಂಡು ಆತನಿಗೆ ಶಸ್ತ್ರಾಸ್ತ್ರ ಪರವಾನಿಗೆಯನ್ನು ನಿರಾಕರಿಸುವಂತಿಲ್ಲ ಎಂದು ಎತ್ತಿಹಿಡಿದಿರುವ ಬಾಂಬೆ ಉಚ್ಚ ನ್ಯಾಯಾಲಯವು ಅರ್ಜಿದಾರರಾದ ಪತ್ರಕರ್ತ ಅಶೋಕ ಪಾಟೀಲ್‌ಗೆ 30 ದಿನಗಳಲ್ಲಿ ಪಿಸ್ತೂಲು ಲೈಸೆನ್ಸ್ ನೀಡುವಂತೆ ಜಲಗಾಂವ್ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಪಾಟೀಲ್‌ರ ಅಲ್ಪ ಆದಾಯದ ಕಾರಣವನ್ನೊಡ್ಡಿ ಅವರಿಗೆ ಪಿಸ್ತೂಲು ಪರವಾನಿಗೆಯನ್ನು ನಿರಾಕರಿಸಲಾಗಿತ್ತು.

ಪರವಾನಿಗೆ ನೀಡುವ ಅಧಿಕಾರಿಗಳು ಯಾವುದೇ ವ್ಯಕ್ತಿಯು ಸಾಕಷ್ಟು ಆಸ್ತಿಯನ್ನು ಹೊಂದಿಲ್ಲವೆಂಬ ಕಾರಣದಿಂದ ಪರವಾನಿಗೆಯನ್ನು ನಿರಾಕರಿಸುವಂತಿಲ್ಲ ಎಂದು ಹೇಳಿದ ನ್ಯಾ.ಕೆ.ಎಲ್.ವಡನೆ ಅವರು, ಹಾಲಿ ಪ್ರಕರಣದಲ್ಲಿ ಅರ್ಜಿದಾರರು ವಾರ್ಷಿಕ ಕೇವಲ 4.1 ಲ.ರೂ.ಗಳ ಆದಾಯ ಹೊಂದಿದ್ದಾರೆಂಬ ಕಾರಣದಿಂದ ಶಸ್ತ್ರಾಸ್ತ್ರ ಪರವಾನಿಗೆಯನ್ನು ನಿರಾಕರಿಸಲಾಗಿದ್ದು, ಇದು ಶಸ್ತ್ರಾಸ್ತ್ರ ಕಾಯ್ದೆಯ ಕಲಂ 14(2)ಕ್ಕೆ ವಿರುದ್ಧವಾಗಿದೆ ಎಂದು ಬೆಟ್ಟು ಮಾಡಿದರು.

ಪಾಟೀಲ್ ಅವರು ಶಸ್ತ್ರಾಸ್ತ್ರ ಪರವಾನಿಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು 2015,ಫೆಬ್ರುವರಿಯಲ್ಲಿ ಜಿಲ್ಲಾಧಿಕಾರಿಗಳು ತಿರಸ್ಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News