×
Ad

ಉ.ಪ್ರ.ಬಿಜೆಪಿ ಶಾಸಕನ ಪುತ್ರನಿಗೆ 7 ವರ್ಷಗಳ ಜೈಲು ಶಿಕ್ಷೆ

Update: 2018-01-19 19:10 IST

ಗೊಂಡಾ(ಉ.ಪ್ರ),ಜ.19: ಆರು ವರ್ಷಗಳಷ್ಟು ಹಳೆಯ ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು ಕತ್ರಾ ಬಝಾರ್‌ನ ಬಿಜೆಪಿ ಶಾಸಕ ವೀರ ವಿಕ್ರಮಸಿಂಗ್ ಪ್ರಿನ್ಸ್ ಅವರ ಪುತ್ರ ವೈಭವ್ ಸಿಂಗ್‌ಗೆ ಏಳು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ.

ಎದುರಾಳಿ ಗುಂಪಿಗೆ ಸೇರಿದ ವ್ಯಕ್ತಿಗಳ ಮೇಲೆ ದಾಳಿ ನಡೆಸಿ, ಅವರನ್ನು ಥಳಿಸಿದ್ದಕ್ಕಾಗಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮಹೇಶ ನೌಟಿಯಾಲ್ ಅವರು ಸಿಂಗ್‌ಗೆ 16,000 ರೂ.ಗಳ ದಂಡವನ್ನೂ ವಿಧಿಸಿದ್ದಾರೆ.

ಕೊಲೆ ಆರೋಪದಲ್ಲಿ ಎದುರಾಳಿ ಗುಂಪಿಗೆ ಸೇರಿದ ಐವರು ವ್ಯಕ್ತಿಗಳಿಗೂ ತಲಾ 10 ವರ್ಷಗಳ ಜೈಲುಶಿಕ್ಷೆಯನ್ನು ನ್ಯಾಯಾಲಯವು ಪ್ರಕಟಿಸಿದೆ.

2012,ಮೇ 8ರಂದು ವೈಭವ್ ಮತ್ತು ನರ್ಸಿಂಗ್ ಹೋಮ್‌ವೊಂದರ ಕಾವಲುಗಾರರ ನಡುವೆ ವಿವಾದದ ಬಳಿಕ ಉಭಯ ಗುಂಪುಗಳು ಘರ್ಷಣೆಗಿಳಿದಿದ್ದವು. ಈ ವೇಳೆ ಗುಂಡಿನ ಕಾಳಗದಲ್ಲಿ ವೈಭವ್‌ನ ಹಿರಿಯ ಸೋದರ ಗೌರವ್ ಸಿಂಗ್ ಮೃತಪಟ್ಟಿದ್ದರೆ, ಆಸ್ಪತ್ರೆಯ ಕಾವಲುಗಾರ ಕುಮಾರ್ ಪಾಂಡೆ ಗಾಯಗೊಂಡಿದ್ದ.

ಈ ಬಗ್ಗೆ ಎರಡೂ ಗುಂಪುಗಳು ದೂರು-ಪ್ರತಿದೂರು ದಾಖಲಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News