ಜಾನಪದ ಹಾಡುಗಾರ್ತಿಯ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆ

Update: 2018-01-19 17:28 GMT

 ಚಂಡಿಗಢ, ಜ. 19: ಸೋಮವಾರ ನಾಪತ್ತೆಯಾಗಿದ್ದ ಹರ್ಯಾನ್ವಿ ಜಾನಪದ ಹಾಡುಗಾರ್ತಿ ಮಮತಾ (40) ಅವರ ಮೃತದೇಹ ಕತ್ತುಕೊಯ್ದ ಸ್ಥಿತಿಯಲ್ಲಿ ಶ್ರುವಾರ ರೋಹ್ಟಕ್ ಜಿಲ್ಲೆಯಲ್ಲಿ ಪತ್ತೆಯಾಗಿದೆ.

 ಜನವರಿ 16ರಂದು ಹಾಡುಗಾರ್ತಿಯ ಕುಟುಂಬ ಪ್ರಕರಣ ದಾಖಲಿಸಿದೆ. ಗೋಹನಾದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಮತಾ ಅವರ ಸಹವರ್ತಿಯೊಂದಿಗೆ ತೆರಳಿದ್ದರು ಎಂದು ಕುಟುಂಬದ ಸದಸ್ಯರು ದೂರಿನಲ್ಲಿ ಆರೋಪಿಸಿದ್ದಾರೆ ಎಂದು ರೋಹ್ಟಕ್‌ನ ಡಿಎಸ್‌ಪಿ ರೋಹ್ತಾಸ್ ಸಿಂಗ್ ಹೇಳಿದ್ದಾರೆ.

 ನಾವು ಗೊಹನಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳತ್ತಿದ್ದೆವು. ಲಾಹ್ಲಿ ಗ್ರಾಮದಲ್ಲಿ ಮಮತಾ ನಮ್ಮನ್ನು ಭೇಟಿಯಾಗಿ ಕೆಲವರನ್ನು ನಮ್ಮಾಂದಿಗೆ ಕಳುಹಿಸಿಕೊಟ್ಟರು. ತನಗೆ ಕಲನೌರ್‌ಗೆ ಹೋಗಲಿಕ್ಕಿದೆ. ಶೀಘ್ರದಲ್ಲಿ ಗೊಹನಾಕ್ಕೆ ಬಂದು ಸೇರುವೆ ಎಂದು ತಿಳಿಸಿದ್ದರು. ಅನಂತರ ಅವರ ಕುಟುಂಬ ಮಮತಾ ನಾಪತ್ತೆಯಾಗಿದ್ದಾರೆ ಎಂದು ಹೇಳಿತು ಮಮತಾ ಅವರ ಸಹವರ್ತಿ ಮೋಹಿತ್ ತಿಳಿಸಿದ್ದಾರೆ.

ಮಮತಾ ಅವರ ಮೃತದೇಹ ಬನಿಯಾನಿ ಗ್ರಾಮದ ಪೊದೆಯೊಂದರಲ್ಲಿ ಗುರುವಾರ ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News