ನಡಾಲ್, ಕಿರ್ಗಿಯೊಸ್ ನಾಲ್ಕನೇ ಸುತ್ತಿಗೆ ಪ್ರವೇಶ

Update: 2018-01-19 18:00 GMT

ಮೆಲ್ಬೋರ್ನ್, ಜ.19: ಸ್ಪೇನ್‌ನ ರಫೆಲ್ ನಡಾಲ್ ಹಾಗೂ ಫ್ರಾನ್ಸ್ ನ ನಿಕ್ ಕಿರ್ಗಿಯೊಸ್ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್ ನಲ್ಲಿ ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟರು.

ಶುಕ್ರವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಒಂದು ಗಂಟೆ, 51 ನಿಮಿಷಗಳ ಹೋರಾಟದಲ್ಲಿ ವಿಶ್ವದ ನಂ.1 ಆಟಗಾರ ನಡಾಲ್ ಬೊಸ್ನಿಯಾದ 28ನೇ ಶ್ರೇಯಾಂಕದ ಡಮಿರ್ ಝುಂಹರ್‌ರನ್ನು 6-1, 6-3, 6-1 ಸೆಟ್‌ಗಳಿಂದ ಮಣಿಸಿದರು.

  ನಡಾಲ್ ರವಿವಾರ ನಡೆಯಲಿರುವ ಪ್ರಿ-ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಅರ್ಜೆಂಟೀನದ 24ನೇ ಶ್ರೇಯಾಂಕದ ಆಟಗಾರ ಡಿಯಾಗೊ ಸ್ಚೆವರ್ಟ್‌ಮನ್‌ರನ್ನು ಎದುರಿಸಲಿದ್ದಾರೆ. 16 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡಿರುವ 65 ಪಂದ್ಯಗಳ ಪೈಕಿ 54ನೇ ಪಂದ್ಯ ಜಯಿಸಿದ್ದಾರೆ. 2009ರ ಫೈನಲ್‌ನಲ್ಲಿ ಫೆಡರರ್‌ರನ್ನು ಮಣಿಸಿ ಆಸ್ಟ್ರೇಲಿಯನ್ ಓಪನ್ ಜಯಿಸಿದ್ದ ನಡಾಲ್ ಎರಡನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.

►ಸೋಂಗಗೆ ಸೋಲುಣಿಸಿದ ಕಿರ್ಗಿಯೊಸ್

ಕಿರ್ಗಿಯೊಸ್ ತನ್ನ ಬಾಲ್ಯದ ಆದರ್ಶ ಆಟಗಾರ ಜೋ ವಿಲ್ಫ್ರೆಡ್ ಸೋಂಗರನ್ನು ಮಣಿಸಿ ನಾಲ್ಕನೇ ಸುತ್ತಿಗೆ ತೇರ್ಗಡೆಯಾದರು. ಕಿರ್ಗಿ ಯೊಸ್ ಶುಕ್ರವಾರ ನಡೆದ 3ನೇ ಸುತ್ತಿನ ಪಂದ್ಯದಲ್ಲಿ ಸೋಂಗರನ್ನು 7-6(5), 4-6,7-6(6), 7-6(5) ಅಂತರದಿಂದ ಸೋಲಿಸಿದರು. ಡಿಮಿಟ್ರೊವ್ ಅಂತಿಮ 16ರ ಸುತ್ತಿಗೆ ತೇರ್ಗಡೆ: ಬಲ್ಗೇರಿಯದ ವಿಶ್ವದ ನಂ.3ನೇ ಆಟಗಾರ ಗ್ರಿಗೊರ್ ಡಿಮಿಟ್ರೊವ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಅಂತಿಮ 16ನೇ ಸುತ್ತಿಗೆ ತಲುಪಿದ್ದಾರೆ.

ಶುಕ್ರವಾರ ಮೂರು ಗಂಟೆಗಳ ಕಾಲ ನಡೆದ ಪುರುಷರ ಸಿಂಗಲ್ ್ಸನ ಮೂರನೇ ಸುತ್ತಿನ ಪಂದ್ಯದಲ್ಲಿ ಡಿಮಿಟ್ರೊವ್ ಅವರು ಅಮೆರಿಕದ ಮ್ಯಾಕ್ನಿ ಮೆಕ್‌ಡೊನಾಲ್ಡ್‌ರನ್ನು 6-3, 4-6, 6-4, 6-4 ಸೆಟ್‌ಗಳಿಂದ ಸೋಲಿಸಿದ್ದಾರೆ. ಡಿಮಿಟ್ರೊವ್ ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯದ ನಿಕ್ ಕಿಗಿರ್  ಯೊಸ್‌ರನ್ನು ಎದುರಿಸಲಿದ್ದಾರೆ.

ಸ್ಪೇನ್‌ನ 10ನೇ ಶ್ರೇಯಾಂಕದ ಪಾಬ್ಲೊ ಕರ್ರೆನೊ ಬುಸ್ಟಾ ಅವರು ಗಿಲ್ಲೆಸ್ ಮುಲ್ಲರ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ನಾಲ್ಕು ಸೆಟ್‌ಗಳ ಅಂತರದಿಂದ ಜಯ ಸಾಧಿಸುವ ಮೂಲಕ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದಾರೆ.

  ಕಳೆದ ವರ್ಷ ಯುಎಸ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಕರ್ರೆನೊ ಬುಸ್ಟಾ 3 ಗಂಟೆ, 18 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮುಲ್ಲರ್‌ರನ್ನು 7-6(7/4), 4-6, 7-5, 7-5 ಸೆಟ್‌ಗಳಿಂದ ಸೋಲಿಸಿದ್ದಾರೆ. ಬುಸ್ಟಾ ಮುಂದಿನ ಸುತ್ತಿನಲ್ಲಿ ಕ್ರೊಯೇಷಿಯದ ಮರಿನ್ ಸಿಲಿಕ್ ಅಥವಾ ಅಮೆರಿಕದ ರಿಯಾನ್ ಹ್ಯಾರಿಸನ್‌ರನ್ನು ಮುಖಾಮುಖಿಯಾಗಲಿದ್ದಾರೆ.

►ಎಡ್ಮಂಡ್, ಮಾರ್ಟಿಕ್ ಅಂತಿಮ 16ರ ಸುತ್ತಿಗೆ

ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಬ್ರಿಟನ್‌ನ ಕೈಲ್ ಎಡ್ಮಂಡ್ ಹಾಗೂ ಪೆಟ್ರಾ ಮಾರ್ಟಿಕ್ ಅಂತಿಮ-16ರ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. 49ನೇ ರ್ಯಾಂಕಿನ ಎಡ್ಮಂಡ್ ಶುಕ್ರವಾರ 3 ಗಂಟೆ, 34 ನಿಮಿಷಗಳ ಕಾಲ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ನಿಕೊಲೊಝ್ ಬಾಸಿಲಾಶ್ವಿಲಿ ಅವರನ್ನು 7-6(7/0), 3-6,4-6,6-0, 7-5 ಅಂತರದಿಂದ ಸೋಲಿಸಿ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು.

 ಎಡ್ಮಂಡ್ ರವಿವಾರ ನಡೆಯಲಿರುವ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಕ್ರೊಯೇಷಿಯದ ಇವೊ ಕಾರ್ಲೊವಿಕ್ ಅಥವಾ ಇಟಲಿಯ ಆ್ಯಂಡ್ರಿಯಸ್ ಸೆಪ್ಪಿ ಅವರನ್ನು ಎದುರಿಸಲಿದ್ದಾರೆ.

►ಬರ್ತ್‌ಡೇ ಗರ್ಲ್’ ಮಾರ್ಟಿಕ್ ಪ್ರಿ-ಕ್ವಾರ್ಟರ್ ಫೈನಲ್‌ಗೆ

ಶುಕ್ರವಾರ 27ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಪೆಟ್ರಾ ಮಾರ್ಟಿಕ್ ಥಾಯ್ಲೆಂಡ್‌ನ ಲುಕ್‌ಸಿಕಾ ಖುಮ್‌ಖುಮ್‌ರನ್ನು 6-3, 3-6, 7-5 ಸೆಟ್‌ಗಳಿಂದ ಸೋಲಿಸಿ ಅಂತಿಮ-16ರ ಸುತ್ತಿಗೆ ಪ್ರವೇಶಿಸಿದ್ದಾರೆ.

 ವಿಶ್ವದ ನಂ.81ನೇ ಆಟಗಾರ್ತಿ ಮಾರ್ಟಿಕ್ ಈ ಹಿಂದೆ ಮೂರು ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ನಾಲ್ಕನೇ ಸುತ್ತಿಗೆ ತಲುಪಿದ್ದು, ಎರಡು ಗಂಟೆ, 10 ನಿಮಿಷಗಳ ಹೋರಾಟದಲ್ಲಿ ಜಯಭೇರಿ ಬಾರಿಸಿದರು. ಮಾರ್ಟಿಕ್ ಮುಂದಿನ ಸುತ್ತಿನಲ್ಲಿ ಬೆಲ್ಜಿಯಂನ ಎಲಿಸ್ ಮೆರ್ಟನ್ಸ್ ಅಥವಾ ಫ್ರಾನ್ಸ್‌ನ ಅಲಿಝ್ ಕಾರ್ನೆಟ್‌ರನ್ನು ಎದುರಿಸಲಿದ್ದಾರೆ.

►ಶರಣ್-ಬೋಪಣ್ಣ ಜೋಡಿ ಮೂರನೇ ಸುತ್ತಿಗೆ ಪ್ರವೇಶ

ಡಿವಿಜ್ ಶರಣ್ ಹಾಗೂ ರೋಹನ್ ಬೋಪಣ್ಣ ಅವರು ತಮ್ಮ ಡಬಲ್ಸ್ ಜೊತೆಗಾರರೊಂದಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಶುಕ್ರವಾರ 2 ಗಂಟೆ, 8 ನಿಮಿಷಗಳ ಕಾಲ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಶರಣ್ ಹಾಗೂ ಅವರ ಅಮೆರಿಕದ ಜೊತೆಗಾರ ರಾಮ್ ಅವರು ಫ್ಯಾಬಿಯೊ ಫೋಗ್ನಿನಿ ಹಾಗೂ ಮಾರ್ಸೆಲ್ ಗ್ರಾನೊಲ್ಲರ್ಸ್‌ ರನ್ನು 4-6, 7-6(4), 6-2 ಅಂತರದಿಂದ ಸೋಲಿಸಿದ್ದಾರೆ.

ಶರಣ್ ಕಳೆದ ವರ್ಷ ಪೂರವ್ ರಾಜಾ ಜೊತೆಗೂಡಿ ಫ್ರೆಂಚ್ ಓಪನ್‌ನಲ್ಲಿ ಮೂರನೇ ಸುತ್ತಿಗೆ ತಲುಪಿದ್ದರು. 2013ರಲ್ಲಿ ಯುಎಸ್ ಓಪನ್‌ನಲ್ಲಿ ಕೂಡ ಮೂರನೇ ರೌಂಡ್‌ಗೆ ಪ್ರವೇಶಿಸಿದ್ದರು.

ಇದೇ ವೇಳೆ 10ನೇ ಶ್ರೇಯಾಂಕದ ಇಂಡೋ-ಫ್ರೆಂಚ್ ಜೋಡಿ ಬೋಪಣ್ಣ ಹಾಗೂ ಎಡ್ವರ್ಡ್ ರೋಜರ್ ಪೋರ್ಚುಗಲ್‌ನ ಜೊವೊ ಸೌಸಾ ಹಾಗೂ ಅರ್ಜೆಂಟೀನದ ಲಿಯೊನಾರ್ಡೊ ಮಯೆರ್‌ರನ್ನು 6-2, 7-6(3) ಸೆಟ್‌ಗಳಿಂದ ಸೋಲಿಸಿ ಅಂತಿಮ-16ರ ಸುತ್ತಿಗೆ ತಲುಪಿದರು.

ಈ ಜೋಡಿ ಮುಂದಿನ ಸುತ್ತಿನಲ್ಲಿ ಏಳನೇ ಶ್ರೇಯಾಂಕದ ಮ್ಯಾಟ್ ಪಾವಿಕ್ ಹಾಗೂ ಆಸ್ಟ್ರೀಯದ ಒಲಿವೆರ್ ಮರಾಚ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News