ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಮೆಂಟ್ ನಲ್ಲಿ ಭಾರತ ಫೈನಲ್ ಗೆ

Update: 2018-01-20 07:42 GMT

ತೌರಂಗಾ, ಜ.20: ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಮೆಂಟ್ ನಲ್ಲಿ ಭಾರತದ ಪುರುಷರ ಹಾಕಿ ತಂಡ ಫೈನಲ್ ಪ್ರವೇಶಿಸಿದೆ.

ಇಂದು ನಡೆದ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ 3-1 ಅಂತರದಲ್ಲಿ  ಜಯ ಗಳಿಸಿದ  ಭಾರತ ಫೈನಲ್ ನಲ್ಲಿ ಅವಕಾಶ ದೃಢಪಡಿಸಿದೆ. ಭಾರತದ ಹರ್ಮನ್ ಪ್ರೀತ್ ಸಿಂಗ್(2ನೇ ನಿಮಿಷ), ದಿಲ್ ಪ್ರೀತ್ ಸಿಂಗ್ (21ನೇ ನಿಮಿಷ) ಮತ್ತು ಮನ್ ದೀಪ್ ಸಿಂಗ್ (47ನೇ ನಿಮಿಷ) ತಲಾ 1 ಗೋಲು ಜಮೆ ಮಾಡಿ ಭಾರತಕ್ಕೆ ಗೆಲುವು ದೊರಕಿಸಿಕೊಟ್ಟರು.  ನ್ಯೂಝಿಲೆಂಡ್ ಪರ ಕೇನ್ ರಸ್ಸೆಲ್ 42ನೇ ನಿಮಿಷದಲ್ಲಿ  ಏಕೈಕ ಗೋಲು ಜಮೆ ಮಾಡಿದರು.

ರವಿವಾರ ನಡೆಯಲಿರುವ ಫೈನಲ್ ನಲ್ಲಿ ಭಾರತ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪಡೆದ ಬೆಲ್ಜಿಯಂ ತಂಡವನ್ನು  ಎದುರಿಸಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News