ಒಂದೇ ಓವರ್ ನಲ್ಲಿ 37 ರನ್ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟ ಡ್ಯುಮಿನಿ!

Update: 2018-01-20 08:18 GMT

ಹೊಸದಿಲ್ಲಿ, ಜ.20: ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಜೆ.ಪಿ. ಡ್ಯುಮಿನಿ ಒಂದೇ ಓವರ್ ನಲ್ಲಿ 37 ರನ್ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಕೇಪ್ ಕೋಬ್ರಾಸ್ ಹಾಗು ನೈಟ್ಸ್ ನಡುವಿನ ಪಂದ್ಯದಲ್ಲಿ ಡ್ಯುಮಿನಿ ಈ ಸಾಧನೆ ಮಾಡಿದ್ದಾರೆ.

ನೈಟ್ಸ್ ತಂಡ ಗಳಿಸಿದ್ದ 240 ರನ್ ಗಳ ಮೊತ್ತವನ್ನು ಬೆನ್ನತ್ತಿದ್ದ ಕೇಪ್ ಕೋಬ್ರಾಸ್ 2 ವಿಕೆಟ್ ಗಳ ನಷ್ಟಕ್ಕೆ 208 ರನ್ ಗಳಿಸಿತ್ತು. 30 ಎಸೆತಗಳಲ್ಲಿ 34 ರನ್ ಗಳು ಬೇಕಿದ್ದಾಗ ಡ್ಯುಮಿನಿ ಬ್ಯಾಟಿಂಗ್ ಮಾಡುತ್ತಿದ್ದರು.

ಲೆಗ್ ಸ್ಪಿನ್ನರ್ ಎಡ್ಡೀ ಲೀಯವರ ಮೊದಲ ನಾಲ್ಕು ಎಸೆತಗಳಲ್ಲಿ ಡ್ಯುಮಿನಿ ನಾಲ್ಕು ಸಿಕ್ಸರ್ ಗಳನ್ನು ಸಿಡಿಸಿದರು. 5 ಬಾಲ್ ನಲ್ಲಿ 2 ರನ್ ಗಳಿಸಿದರು.  ಆದರೆ ಎಡ್ಡೀಯವರ ದುರಾದೃಷ್ಟಕ್ಕೆ 6ನೆ ಎಸೆತ ನೋಬಾಲ್ ಆಗಿದ್ದು, ಡ್ಯುಮಿನಿ ಆ ಎಸೆತದಲ್ಲಿ ಬೌಂಡರಿ ಸಿಡಿಸಿದ್ದರು. ಕೊನೆಯ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸುವ ಮೂಲಕ ಡ್ಯುಮಿನಿ ತಂಡವನ್ನು ಗೆಲ್ಲಿಸಿದ್ದರು. ಇದರೊಂದಿಗೆ ಒಂದೇ ಓವರ್ ನಲ್ಲಿ ಡ್ಯುಮಿನಿ 37 ರನ್ ಸಿಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News