ಅಂಧರ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ತಂಡ

Update: 2018-01-20 13:21 GMT

ಶಾರ್ಜಾ, ಜ.20: ಅಂಧರ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿದ ಭಾರತ ವಿಶ್ವಕಪ್ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಟಾಸ್ ಗೆದ್ದ ಭಾರತ ಫೀಲ್ಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ 40 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 308 ರನ್ ಗಳನ್ನು ಗಳಿಸಿತು. ಪಾಕ್ ಪರ ಬದರ್ ಮುನೀರ್ 57  ರನ್, ರಿಯಾಸತ್ ಖಾನ್ 48 ಹಾಗು ನಿಸಾರ್ ಅಲಿ 47 ರನ್ ಗಳಿಸಿದರು.

ಬುಧವಾರ ನಡೆದ ಸೆಮಿಫೈನಲ್ ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಿದ್ದ ಪಾಕಿಸ್ತಾನ 156  ರನ್ ಗಳಿಂದ ಭರ್ಜರಿ ಜಯ ಗಳಿಸಿತ್ತು. ಸೆಮಿಫೈನಲ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ 7 ವಿಕೆಟ್ ಗಳಿಂದ ಜಯಿಸಿತ್ತು.

ಗುರಿಯನ್ನು ಬೆನ್ನತ್ತಿದ ಭಾರತೀಯ ಆಟಗಾರರು ಕೊನೆಯ ಓವರ್ ನಲ್ಲಿ ತಂಡವನ್ನು ಗೆಲ್ಲಿಸಿದರು. 8 ವಿಕೆಟ್ ಗಳ ನಷ್ಟಕ್ಕೆ ಭಾರತ 309 ರನ್ ಗಳಿಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News