60 ಮೀ. ವಿಶ್ವ ದಾಖಲೆ ಮುರಿದ ಕ್ರಿಸ್ಟಿಯನ್ ಕೋಲ್ಮನ್

Update: 2018-01-20 18:14 GMT

ದಕ್ಷಿಣ ಕರೊಲಿನಾ, ಜ.20: ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ್ದ ಅಮೆರಿಕದ ಓಟಗಾರ ಕ್ರಿಸ್ಟಿಯನ್ ಕೋಲ್ಮನ್ ಎರಡು ದಶಕಗಳ ಹಳೆಯ ವಿಶ್ವ ದಾಖಲೆಯೊಂದನ್ನು ಮುರಿದರು.

21ರ ಹರೆಯದ ಕ್ರಿಸ್ಟಿಯನ್ 60 ಮೀ.ಓಟವನ್ನು 6.37 ಸೆಕೆಂಡ್‌ನಲ್ಲಿ ತಲುಪಿ ನೂತನ ವಿಶ್ವ ದಾಖಲೆ ನಿರ್ಮಿಸಿದರು.

ಈ ವರ್ಷ ವೃತ್ತಿಪರ ಅಥ್ಲೀಟ್ ಆಗಿ ಕಣಕ್ಕಿಳಿದಿರುವ ಕೊಲ್‌ಮನ್, ‘‘ಇದು ನನ್ನ ವೃತ್ತಿಜೀವನದ ಉತ್ತಮ ಆರಂಭ. ನನಗೆ ಇದು ನಂಬಲು ಸಾಧ್ಯವಾಗುತ್ತಿಲ್ಲ, ಇದನ್ನು ನಾನು ನಿರೀಕ್ಷಿಸಿರಲಿಲ್ಲ’’ ಎಂದರು.

ಅಮೆರಿಕದ ಉದಯೋನ್ಮುಖ ಓಟಗಾರನಾಗಿರುವ ಕೋಲ್ಮನ್ ಕಳೆದ ವರ್ಷ 100 ಮೀ.ಓಟದಲ್ಲಿ 9.82 ಸೆಕೆಂಡ್‌ನಲ್ಲಿ ಗುರಿ ತಲುಪಿ ವಿಶ್ವದ ಗಮನ ಸೆಳೆದಿದ್ದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಓಟದ ದಂತಕತೆ ಉಸೇನ್ ಬೋಲ್ಟ್‌ರನ್ನು ಹಿಂದಿಕ್ಕಿ ಬೆಳ್ಳಿ ಜಯಿಸಿದ್ದ ಕೋಲ್ಮನ್‌ಲಂಡನ್‌ನಲ್ಲಿ ಆತಿಥೇಯ ಬ್ರಿಟನ್ ವಿರುದ್ಧ 4x100 ಮೀ. ರಿಲೇಯಲ್ಲಿ ಎರಡನೇ ಬಾರಿ ಬೆಳ್ಳಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News