20 ಆಪ್ ಶಾಸಕರ ಅನರ್ಹ ಪ್ರಕರಣ: ಚುನಾವಣಾ ಆಯೋಗದ ಶಿಫಾರಸಿಗೆ ರಾಷ್ಟ್ರಪತಿ ಅಂಗೀಕಾರ

Update: 2018-01-21 11:03 GMT

ಹೊಸದಿಲ್ಲಿ, ಜ.21: ಲಾಭದಾಯಕ ಹುದ್ದೆಗಳನ್ನು ಹೊಂದಿರುವ ಆರೋಪದಲ್ಲಿ 20 ಆಪ್ ಶಾಸಕರನ್ನು ಅನರ್ಹಗೊಳಿಸಿ ಚುನಾವಣಾ ಆಯೋಗ ಸಲ್ಲಿಸಿದ್ದ ಶಿಫಾರಸ್ಸನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಗೀಕರಿಸಿದ್ದಾರೆ.

ದಿಲ್ಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಸೇರಿ 20 ಶಾಸಕರ ಅನರ್ಹ ಪ್ರಕರಣದಿಂದ ಸದ್ಯದ ಮಟ್ಟಿಗೆ ಕೇಜ್ರಿವಾಲ್ ಸರಕಾರಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ ತೆರವಾದ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಸೋತರೆ ಆಪ್ ಸರಕಾರಕ್ಕೆ ಹಿನ್ನಡೆಯಾಗಲಿದೆ.

ಶಾಸಕರ ಅನರ್ಹ ಪ್ರಕರಣವು ದುರದೃಷ್ಟಕರವಾಗಿದ್ದು, ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಹಿರಿಯ ಆಮ್ ಆದ್ಮಿ ನಾಯಕ ಗೋಪಾಲ್ ರೈ ಹೇಳಿದ್ದಾರೆ.

6 ತಿಂಗಳೊಳಗಾಗಿ 20 ಅಸೆಂಬ್ಲಿ ಸೀಟುಗಳಿಗೆ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News