20 ಮಂದಿ ಮಾತ್ರ ಭಾಗವಹಿಸಿದ್ದ ಈ ಮದುವೆ ವಿಶೇಷವೆನಿಸಿದ್ದು ವಧು-ವರರಿಂದ !

Update: 2018-01-21 12:49 GMT

ಲಂಡನ್, ಜ. 21: ಇಪ್ಪತ್ತು ಮಂದಿ ಮಾತ್ರ ಭಾಗವಹಿಸಿದ ಸರಳ ಸಮಾರಂಭದಲ್ಲಿ ನಡೆದ ಈ ಮದುವೆ ಬ್ರಿಟನ್ ನಾದ್ಯಂತ ಸುದ್ದಿಯಾಗಿದೆ. ಇದಕ್ಕೆ ಕಾರಣ ವಧು-ವರರು. ಏಕೆಂದರೆ ವರನ ವಯಸ್ಸು 90 ಹಾಗು ವಧುವಿನ ವಯಸ್ಸು 81!.

ಶುಕ್ರವಾರ ಟೆಡ್ ರೈಟ್ ಮತ್ತು ಜಾಯ್ನ್ ಗ್ರಾಂಡ್ ಜೋಡಿಯ ವಿವಾಹ ನೆರವೇರಿತು. ಈ ಜೋಡಿ ಬ್ರಿಟನ್ ನ ಅತಿ ಹಿರಿಯ ದಂಪತಿಯಾಗಿದೆ. ಇಬ್ಬರೂ ಹದಿನೈದು ವರ್ಷಗಳ ಹಿಂದೆ ಪರಸ್ಪರ ಭೇಟಿಯಾಗಿದ್ದರು. ಇಬ್ಬರೂ ತಮ್ಮ ಸಂಗಾತಿಗಳನ್ನು ಕಳೆದುಕೊಂಡಿದ್ದಾರೆ. ಟೆಡ್ ರೈಟ್ 17 ವರ್ಷ ದ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದರೆ, ಜಾಯ್ನ್ ರಿಗೆ 63 ವರ್ಷವಾಗಿದ್ದಾಗ ಅವರ ಪತಿ ಮೃತಪಟ್ಟಿದ್ದರು. ಇಬ್ಬರಿಗೂ ಇನ್ನೊಂದು ಮದುವೆ ಆಗಬೇಕೆನ್ನುವ ಬಯಕೆ ಇರಲಿಲ್ಲವಾದರೂ ಕೊನೆಗೆ ಒಬ್ಬರನ್ನೊಬ್ಬರು ಬಿಟ್ಟಿರಲಾಗದೆ ಮದುವೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News