ಮನೆಗೆ ನುಗ್ಗಿ ನಗ ನಗದು ಕಳವು

Update: 2018-01-21 17:14 GMT

ಬೈಂದೂರು, ಜ.21: ಬೈಂದೂರು ಬಂಕೇಶ್ವರ ಎಂಬಲ್ಲಿ ಜ.14ರಿಂದ 19ರ ಮಧ್ಯಾವಧಿಯಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಬಂಕೇಶ್ವರದ ನಾಗಮ್ಮ ಎಂಬವರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಕಪಾಟಿನ ಬಾಗಿಲನ್ನು ತೆರೆದು ಅದರಲ್ಲಿದ್ದ ಎರಡು ಚಿನ್ನದ ಉಂಗುರ, ಮೂರು ಚಿನ್ನದ ಸರ, ಎರಡು ಚಿನ್ನದ ಕಿವಿ ಸೆಟ್, ಒಂದು ಚಿನ್ನದ ಬ್ರಾಸ್ ಲೆಟ್, ಒಂದು ಕಿವಿಯ ಲೊಲಾಕು ಒಟ್ಟು 1.50 ಲಕ್ಷ ರೂ. ಮೌಲ್ಯದ ಸುಮಾರು 9 ಪವನ್ ಚಿನ್ನಾಭರಣ ಹಾಗೂ 35,000 ರೂ. ನಗದು ಕಳವು ಮಾಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News