ಎಸ್‌ಎಸ್‌ಎಫ್ ರಾಜ್ಯಮಟ್ಟದ ಪ್ರತಿಭೋತ್ಸವ ಸಮಾರೋಪ: ದಕ್ಷಿಣ ಕನ್ನಡ ಪ್ರಥಮ, ಕೊಡಗು ದ್ವಿತೀಯ

Update: 2018-01-21 17:21 GMT

ಮಂಗಳೂರು, ಜ. 21: ಜ.19 ರಿಂದ 3 ದಿನಗಳ ಕಾಲ ಕೊಟ್ಟಮುಡಿ ಮರ್ಕಝುಲ್ ಹಿದಾ ಕ್ಯಾಂಪಸ್‌ನಲ್ಲಿ ನಡೆದ ಎಸ್ಸೆಸ್ಸೆಫ್ ರಾಜ್ಯಮಟ್ಟದ ಪ್ರತಿಭೋತ್ಸವ ಕಾರ್ಯಕ್ರಮ ರವಿವಾರ ಸಮಾರೋಪಗೊಂಡಿತು.

ರಾಜ್ಯದ 21 ಜಿಲ್ಲೆಗಳ ಸುಮಾರು 2 ಸಾವಿರಕ್ಕೂ ಅಧಿಕ ಪ್ರತಿಭೆಗಳು 7 ವಿಭಾಗಗಳಾಗಿ 96 ಸ್ಪರ್ಧೆಗಳನ್ನು 10 ವೇದಿಕೆಗಳಲ್ಲಿ ಸ್ಪರ್ಧಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಕೊಡಗು ಹಾಗೂ ಉಡುಪಿ ಜಿಲ್ಲೆ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ತಮ್ಮ ದಾಗಿಸಿಕೊಂಡವು.

ಸಮಾರೋಪ ಸಮಾರಂಭದಲ್ಲಿ ಸಯ್ಯದ್ ಆಟಕೋಯ ತಂಙಳ್ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಸಯ್ಯದ್ ಹಾಮಿದ್ ಅಲ್ ಕಾಮಿಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ ಸಭೆಯನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್  ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಪಾಸ್ತಾವಿಕವಾಗಿ ಮಾತನಾಡಿದರು.

ಎಸ್.ವೈ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಸಂದೇಶ ಭಾಷಣ ಮಾಡಿದರು. ಕೊಡಗು ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ  ಶೈಖುನಾ ಮೆಹಮೂದ್‌ ಮುಸ್ಲಿಯಾರ್ ಎಡಪಾಲ, ಆಹಾರ ಸರಬರಾಜು ಮತ್ತು ನಾಗರಿಕ ಸಚಿವ ಯು.ಟಿ.ಖಾದರ್, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಕಣಚೂ ಮೋನು ಹಾಜಿ, ಅಬು ಸುಫಿಯಾನ್ ಮದನಿ, ಶಾಫಿ ಸಅದಿ  ಬೆಂಗಳೂರು, ಕೊಡಗು ಜಿಲ್ಲಾ ಜನಪದ ಪರಿಷತ್ ಅಧ್ಯಕ್ಷ ಅನಂತ ಶಯನ, ಮಾನವ ಸಂಪನ್ಮೂಲ ಇಲಾಖೆ ಅಧ್ಯಕ್ಷ ಉಮರ್ ಬೀಜಕಟ್ಟೆ, ಉಸ್ಮಾನ್ ಹಾಜಿ ನಾಪೋಕ್ಲು, ಅಬ್ದುಲ್ ಹಕೀಂ ಕೊಡ್ಲಿಪೇಟೆ, ಕೊಡಗು ವೆಲ್ಫೇರ್ ಯುಎಇ ಇದರ ಅಧ್ಯಕ್ಷ ಅಬೂಬಕರ್ ಹಾಜಿ ಕೊಟ್ಟಮುಡಿ, ಅಬ್ದುಲ್ ಲತೀಫ್ ಸುಂಟಿಕೊಪ್ಪ, ಸಯ್ಯದ್ ಸಿಟಿಎಂ ತಂಙಳ್, ಯಾಕೂಬ್ ಯೂಸುಫ್ ಬೆಂಗಳೂರು, ಸಾದಿಕ್ ಮಾಸ್ಟರ್ ಮಲೆಬೆಟ್ಟು. ಅಶ್ರಫ್ ಕಿನಾರ, ಹಾರಿಸ್ ಕೊಟ್ಟಮುಡಿ, ಎಚ್.ಎ. ಹಂಝ ಕೊಟ್ಟಮುಡಿ ಮುಂತಾದವರು ಭಾಗವಹಿಸಿದ್ದರು. ಹಾಫಿಳ್ ಸುಫ್‌ಯಾನ್ ಸಖಾಫಿ ಸ್ವಾಗತಿಸಿ, ಶರೀಫ್ ಬೆಂಗಳೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News