ಆಳ್ವಾಸ್: ತಾಂತ್ರಿಕ ಶಿಕ್ಷಕರ ಆಂಡ್ರಾಯ್ಡ್ ತರಬೇತಿ ಕಾರ್ಯಕ್ರಮ

Update: 2018-01-23 04:52 GMT

ಮೂಡುಬಿದಿರೆ, ಜ. 23: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಭಾಗ, ವಿಟಿಯು ಬೆಳಗಾವಿ ಮತ್ತು ಗೂಗಲ್ ಸಂಸ್ಥೆಯ ಸಹಭಾಗಿತ್ವದಲ್ಲಿ   ತಾಂತ್ರಿಕ ಶಿಕ್ಷಕರಿಗೆ ಐದು ದಿನಗಳ ಆಂಡ್ರಾಯ್ಡ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ತರಬೇತುದಾರರಾಗಿ ಗೂಗಲ್ ಸಂಸ್ಥೆಯ ಸಿಮಿ ಆನಂದ್ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಶಿಕ್ಷಕನು ನಿತ್ಯವೂ ವಿದ್ಯಾರ್ಥಿಯಾಗಿರಬೇಕು. ಭವಿಷ್ಯದ ಸವಾಲುಗಳಿಗೆ ಇಂದೇ ಅಣಿಯಾಗಬೇಕು.  ಭವಿಷ್ಯದಲ್ಲಿ ವರ್ತಮಾನದ  ಜ್ಞಾನ ಶಿಕ್ಷಕನನ್ನು ನೇಪಥ್ಯಕ್ಕೆ ಸರಿಸುತ್ತದೆ ಎಂದರು.

ವಿಭಾಗದ ಮುಖ್ಯಸ್ಥ ಪ್ರೊ. ಜಯಂತ ರಾಥೋಡ್ ಸ್ವಾಗತಿಸಿದರು. ಡಾ. ರೂಪಲಕ್ಷ್ಮಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ದಿವ್ಯ ರವಿ ನಿರೂಪಿಸಿ, ಪ್ರೊ. ಸುದರ್ಶನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News