ಪಾಣೆಮಂಗಳೂರಿನ ಖ್ಯಾತ ವೈದ್ಯ ಡಾ. ವಿಶ್ವನಾಥ್ ನಾಯಕ್ ರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

Update: 2018-01-23 08:20 GMT

ಮಂಗಳೂರು, ಜ. 23: ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ವೈದ್ಯ ಡಾ. ವಿಶ್ವನಾಥ್ ನಾಯಕ್ ರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಯೊಂದು ಅರಸಿಕೊಂಡು ಬಂದಿದೆ.

ಅವರು ಗ್ಲೋಬಲ್ ಅಚೀವರ್ಸ್ ಅವಾರ್ಡ್‌ ಗೆ ಭಾಜನರಾಗುವ ಮೂಲಕ‌ ಪಾಣೆಮಂಗಳೂರಿಗೆ ಕೀರ್ತಿ ತಂದಿದ್ದಾರೆ. ಜ. 20ರಂದು ದುಬೈನಲ್ಲಿ ನಡೆದ Celebrating The Global Indians ಅಂತಾರಾಷ್ಟ್ರೀಯ ಮಟ್ಟದ ಕಾನ್ಫರೆನ್ಸ್ ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಯುಎಇ ಭಾರತೀಯ ರಾಯಭಾರಿ ನವದೀಪ್ ಸಿಂಗ್ ಸೂರಿ ಅವರಿಂದ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ವಿಶ್ವನಾಥ್  ಪಾಣೆಮಂಗಳೂರಿನ ಹಳೆಪೇಟೆಯಲ್ಲಿ ಕ್ಲಿನಿಕ್ ನಡೆಸುತ್ತಿದ್ದಾರೆ. ಅವರ ಪತ್ನಿ ಜಯಮಾಲ ಕೂಡ ವೈದ್ಯರು.

ವಿಶ್ವನಾಥ್ ಸ್ಥಳೀಯ ಭಾಷೆಗಳಾದ ಬ್ಯಾರಿ, ತುಳು ಸಹಿತ ಇತರ ಭಾಷೆಯನ್ನು ಕರಗತ ಮಾಡಿಕೊಂಡಿರುವ ಡಾಕ್ಟರ್, ನಗಿಸುತ್ತಲೇ ರೋಗಿಗಳ ಮಾತೃ ಭಾಷೆಯಲ್ಲಿ ಆರೋಗ್ಯ ವಿಚಾರಿಸಿ, ನಗಿಸುತ್ತಲೇ ಕಳುಹಿಸಿಕೊಡುವವರು. ಇವರ ಚಿಕಿತ್ಸೆಯ ವೆಚ್ಚ 20 ರೂಪಾಯಿಯಿಂದ ಆರಂಭವಾಗುವುದು‌. ವೃತ್ತಿ ಜೀವನವನ್ನು ಸೇವೆಯಾಗಿ ಮಾಡಿಕೊಂಡವರು. ಡಾಕ್ಟರ್ ವಿಶ್ವನಾಥ್ ರವರ ಈ ಸೇವೆಗೆ ದ.ಕ. ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರತ್ನ, ವೈದ್ಯ ರತ್ನ ಹಾಗೂ ಆ ಬಳಿಕ "ರಾಷ್ಟ್ರೀಯ ಗೌರವ್ ಅವಾರ್ಡ್"  ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ  ಪಡೆದಿದ್ದಾರೆ. ಇದೀಗ ಅವರ ಸೇವೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಡಾ. ವಿಶ್ವನಾಥ್ ನಾಯಕ್ ರಿಗೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್ ಐ ಒ) ಪಾಣೆಮಂಗಳೂರು ಶಾಖೆಯ ಅಧ್ಯಕ್ಷ  ಮುಬಾರಿಶ್ ಚೆಂಡಾಡಿ ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News