×
Ad

ನಿರ್ಮಾಣವಾಗದ ಆಸ್ಪತ್ರೆ ಕಟ್ಟಡ: ಮೃತದೇಹಗಳ ಜೊತೆ ಮಲಗುತ್ತಿರುವ ಸಿಬ್ಬಂದಿ!

Update: 2018-01-23 21:24 IST

ಉತ್ತರ ಪ್ರದೇಶ, ಜ.23: ಮರಣೋತ್ತರ ಪರೀಕ್ಷೆ ನಡೆಯುವ ಕೊಠಡಿಯೊಳಗೆ, ಮೃತದೇಹಗಳ ಜೊತೆ ಆಸ್ಪತ್ರೆಯ ಸಿಬ್ಬಂದಿ ಮಲಗುತ್ತಿದ್ದ ಆಘಾತಕಾರಿ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಹರ್ದೋಯಿ ನಗರದ ನಿರ್ಮಾಣ ಹಂತದ ಆಸ್ಪತ್ರೆಯ ದುಸ್ಥಿತಿ ಇದಾಗಿದೆ.

3 ವರ್ಷಗಳಿಂದಲೂ ನಿರ್ಮಾಣ ಹಂತದಲ್ಲಿರುವ ಈ ಆಸ್ಪತ್ರೆ ಉತ್ತರ ಪ್ರದೇಶ ರಾಜ್ಯ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದಡಿ 2016ರಲ್ಲೇ 100 ಬೆಡ್ ಗಳು, ಆಪರೇಷನ್ ಕೊಠಡಿಯೊಂದು ನಿರ್ಮಾಣವಾಗಬೇಕಾಗಿತ್ತು. ಆದರೆ ಇಲ್ಲಿಯವರೆಗೆ ಕೇವಲ ಮರಣೋತ್ತರ ಪರೀಕ್ಷೆಯ ಕೊಠಡಿಯ ನಿರ್ಮಾಣ ಮಾತ್ರ ಪೂರ್ಣಗೊಂಡಿದೆ.

ಈ ಬಗ್ಗೆ ಮಾಧ್ಯಮಗಳು ಮುಖ್ಯ ವೈದ್ಯಕೀಯ ಅಧಿಕಾರಿಯನ್ನು ಸಂಪರ್ಕಿಸಿದ್ದು, ಅವರು ಕೂಡ ಆಸ್ಪತ್ರೆಯ ಸಿಬ್ಬಂದಿ ಮರಣೋತ್ತರ ಪರೀಕ್ಷೆ ಕೊಠಡಿಯಲ್ಲಿ ಮಲಗುವುದನ್ನು ಸ್ಪಷ್ಟಪಡಿಸಿದ್ದಾರೆ.

“ಆಸ್ಪತ್ರೆಯ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಸಿಬ್ಬಂದಿ ಹೀಗೆ ಮಲಬೇಕಾಗಿದೆ” ಎಂದವರು ಹೇಳಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕುಂದುಕೊರತೆಗಳಿಂದ ಉತ್ತರ ಪ್ರದೇಶ ಸುದ್ದಿಯಾಗುತ್ತಲೇ ಇದೆ. ಇಲ್ಲಿನ ಗೋರಖ್ ಪುರ ಬಿಆರ್ ಡಿ ಮೆಡಿಕಲ್ ಕಾಲೇಜಿನಲ್ಲಿ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡ ಕಾರಣ 60ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News