ವಿದ್ಯುತ್ ಕಂಬಕ್ಕೆ ಟಿಪ್ಪರ್ ಢಿಕ್ಕಿ: ಅಪಾರ ನಷ್ಟ

Update: 2018-01-23 18:30 GMT

ಶಿರ್ವ, ಜ.23: ಶಿರ್ವ ಗ್ರಾಪಂ ಕಚೇರಿ ಎದುರುಗಡೆ ಇಂದು ಬೆಳಗಿನ ಜಾವ 5:45ರ ಸುಮಾರಿಗೆ ಟಿಪ್ಪರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೆಸ್ಕಾಂಗೆ ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿ ಯಾಗಿದೆ.

ಹಿಂಭಾಗ ಎತ್ತಿಕೊಂಡು ಬಂದ ಟಿಪ್ಪರ್ ವಿದ್ಯುತ್ ಲೈನ್ ಎಳೆದುಕೊಂಡು ಹೋದ ಪರಿಣಾಮ ವಿದ್ಯುತ್ ಕಂಬ, ಲೈನ್ ಹಾಗೂ ವಿದ್ಯುತ್ ಪರಿವರ್ತಕಕ್ಕೆ ಹಾನಿ ಯಾಗಿದೆ. ಇದರಿಂದ ಒಟ್ಟು 2,25,000 ರೂ. ನಷ್ಟ ಉಂಟಾಗಿರುವು ದಾಗಿ ಶಿರ್ವ ಮೆಸ್ಕಾಂ ಶಾಖಾಧಿಕಾರಿ ಮಲ್ಲಿಕಾರ್ಜುನ ನೀಡಿರುವ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News