×
Ad

ಪಾಕಿಸ್ತಾನ: ಝೈನಬಾ ಪ್ರಕರಣದ ಪ್ರಧಾನ ಆರೋಪಿಯ ಬಂಧನ

Update: 2018-01-24 16:46 IST

ಲಾಹೋರ್,ಜ.24: ಪಾಕಿಸ್ತಾನದ ಕಸೂರಿಯ ಆರು ವರ್ಷ ವಯಸ್ಸಿನ ಝೈನಬಾ ಅತ್ಯಾಚಾರ ಹತ್ಯೆ ಪ್ರಕರಣದಲ್ಲಿ ಪ್ರಧಾನ ಆರೋಪಿಯನ್ನು ಬಂಧಿಸಲಾಗಿದೆ. ನೆರೆಮನೆಯಲ್ಲಿ ವಾಸಿಸುತ್ತಿದ್ದ 23 ವರ್ಷದ ಇಮ್ರಾನ್ ಅಲಿ ಎನ್ನುವ ಯುವಕ ಪೊಲೀಸಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳನ್ನು ಉದ್ಧರಿಸಿ ಮಾಧ್ಯಮಗಳು ವರದಿ ಮಾಡಿವೆ.  ಈತನನ್ನು ಪೊಲೀಸರು ಈ ಹಿಂದೆಯೂ ಕಸ್ಟಡಿಗೆ ಪಡೆದಿದ್ದರು. ಆದರೆ ಝೈನಬಾಳ ಮನೆಯವರು ಈತ ಇಂತಹ ಕ್ರೂರ ಕೃತ್ಯವೆಸಗಲಾರ ಎಂದದ್ದರಿಂದ ಬಿಡುಗಡೆಗೊಳಿಸಿದ್ದರು.  ನಂತರ ಕೆಲವು ಪುರಾವೆಗಳು ಲಭಿಸಿದ ಹಿನ್ನೆಲೆಯಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಡಿಎನ್‍ಎ ಪರೀಕ್ಷೆ  ನಡೆಸಿ ಆರೋಪಿಯನ್ನು ಗುರುತಿಸಲಾಗಿದೆ. ಈತನ ಗೆಳೆಯರಲ್ಲಿ ಹಲವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಬೇರೆ ಯಾರು ಕೊಲೆಕೃತ್ಯದಲ್ಲಿಶಾಮೀಲಾಗಿದ್ದಾರ ಎಂದು ತನಿಖೆ ನಡೆಯುತ್ತಿದೆ. ಜನವರಿ ಐದರಂದು ಝೈನಬಾಳ ಮೃತದೇಹ ಕಸದ ರಾಶಿಯಲ್ಲಿ ಪತ್ತೆಯಾಗಿತ್ತು.  ಅತ್ಯಾಚಾರವೆಸಗಿ ಬಾಲಕಿಯನ್ನು ಕೊಲ್ಲಲಾಗಿದೆ ಎಂದು  ಮರಣೋತ್ತರ ಪರೀಕ್ಷೆಯಲ್ಲಿ ಬಯಲಾದಾಗ ಪಾಕಿಸ್ತಾನಾದ್ಯಂತ ಭಾರೀ ಪ್ರತಿಭಟನೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News