ಜನರ ಭಾವನೆಗಳನ್ನು ನೋಯಿಸುವ ಚಿತ್ರಗಳನ್ನು ನಿರ್ಮಿಸಬಾರದು : ದಿಗ್ವಿಜಯ್ ಸಿಂಗ್

Update: 2018-01-25 11:27 GMT

ಹೊಸದಿಲ್ಲಿ,ಜ.25 : ಸಂಜಯ್ ಲೀಲಾ ಭನ್ಸಾಲಿ ಅವರ ವಿವಾದಿತ ಚಲನಚಿತ್ರ 'ಪದ್ಮಾವತ್' ಬಿಡುಗಡೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, "ಒಂದು ನಿರ್ದಿಷ್ಟ ಧರ್ಮ ಅಥವಾ ಜಾತಿಯ ಜನರ  ಭಾವನೆಗಳಿಗೆ ನೋವುಂಟು ಮಾಡುವ ಹಾಗೂ ಐತಿಹಾಸಿಕ ವಾಸ್ತವಗಳನ್ನು ಅವಲಂಬಿಸದಂತಹ ಚಿತ್ರಗಳನ್ನು ತಯಾರಿಸಬಾರದು,'' ಎಂದು ಹೇಳಿದ್ದಾರೆ.

ರಜಪೂತ ಕರ್ನಿ ಸೇನಾದಿಂದ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳು ಹಾಗೂ ಗುರುಗ್ರಾಮದಲ್ಲಿ ಶಾಲಾ ಬಸ್ ಒಂದರ ಮೇಲಿನ ದಾಳಿ ಪ್ರಕರಣವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಖಂಡಿಸಿದ ಬೆನ್ನಲ್ಲೇ ಸಿಂಗ್ ಅವರ ಹೇಳಿಕೆ ಬಂದಿದೆ. "ಮಕ್ಕಳ ಮೇಲಿನ ಹಿಂಸೆಯನ್ನು ಸಮರ್ಥಿಸಲು ಕಾರಣವೇ ಇಲ್ಲ. ಹಿಂಸೆ ಹಾಗೂ ದ್ವೇಷ ದುರ್ಬಲರ ಅಸ್ತ್ರ. ಬಿಜೆಪಿಯ ದ್ವೇಷ ಮತ್ತು ಹಿಂಸೆ ಇಡೀ ದೇಶವನ್ನೇ ಹೊತ್ತಿ ಉರಿಸುತ್ತಿದೆ,'' ಎಂದು ರಾಹುಲ್ ಟ್ವೀಟ್ ಮಾಡಿದ್ದರು.

ತರುವಾಯ ಮಧ್ಯ ಪ್ರದೇಶದ ಚಿತ್ರಮಂದಿರಗಳ ಮಾಲಕರು 'ಪದ್ಮಾವತ್' ಪ್ರದರ್ಶನ ನಡೆಸದೇ ಇರಲು ತೀರ್ಮಾನಿಸಿದ್ದಾರೆ.  ಆದರೆ ಚಿತ್ರ ಪ್ರರ್ದಶಿಸಲು ಇಚ್ಛಿಸುವ ಚಿತ್ರಮಂದಿರಗಳಿಗೆ ಭದ್ರತೆಯೊದಗಿಸುವುದಾಗಿ ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News