×
Ad

ಉತ್ತರ ಭಾರತದಲ್ಲಿ 'ಶೌಚಾಲಯ ಪ್ರವಾಸ' ಮಾಡಲಿರುವ ಡಚ್ ಪ್ರಜೆ

Update: 2018-01-25 19:29 IST

ಲಕ್ನೊ, ಜ.25: ಎರಡು ವರ್ಷ ಸಂಸ್ಕೃತ ಕಲಿತಿರುವ, ಮುಕೇಶ್ ಹಾಡುಗಳನ್ನು ಸರಾಗವಾಗಿ ಹಾಡುವ ಮತ್ತು ಬಾಲಿವುಡ್ ಹಾಗೂ ಭಾರತ ಪ್ರೇಮಿಯಾಗಿರುವ ಹಾಲೆಂಡ್ ಪ್ರಜೆ ಹರ್ಮನ್ ಲಿನ್ಸೆ ಬುಧವಾರದಂದು ಭಾರತಕ್ಕೆ ಆಗಮಿಸಿದ್ದು 12 ದಿನಗಳ ಕಾಲ ಉತ್ತರ ಭಾರತದಾದ್ಯಂತ ವಿಶಿಷ್ಟ ‘ಶೌಚಾಲಯ ಪ್ರವಾಸ' ನಡೆಸಲಿದ್ದಾರೆ. ಫಿನಿಶ್ ಸೊಸೈಟಿ ಎಂಬ ಸಂಸ್ಥೆ ಆಯೋಜಿಸಿರುವ ಈ ಪ್ರವಾಸದಲ್ಲಿ ಹರ್ಮನ್ ಉತ್ತರ ಭಾರತೀಯರ ಶುಚಿತ್ವ ಮತ್ತು ನೈರ್ಮಲ್ಯದ ಅಗತ್ಯತೆಗಳು ಮತ್ತು ಈ ಬಗ್ಗೆ ಅವರ ನಡವಳಿಕೆಯನ್ನು ಅಭ್ಯಸಿಸಲು ಮುಂದಾಗಿದ್ದಾರೆ.

ಫಿನಿಶ್ ಸೊಸೈಟಿಯು ಉತ್ತಮ ನೈರ್ಮಲೀಕರಣ ಅಭ್ಯಾಸಗಳನ್ನು ಪ್ರೋತ್ಸಾಹಿಸುತ್ತಿರುವ ನಗರಗಳಲ್ಲಿ ಹರ್ಮನ್ ಅವರ ಶೌಚಾಲಯ ಯಾತ್ರೆಯು ಸಾಗಲಿದೆ. ಇವುಗಳಲ್ಲಿ ರಾಜಸ್ಥಾನದ ಉದಯ್‌ಪುರ ಮತ್ತು ಉತ್ತರ ಪ್ರದೇಶದ ಆಗ್ರಾ, ವಾರಣಾಸಿ ಮತ್ತು ಲಕ್ನೊ ಹಾಗೂ ಬಿಹಾರದ ದರ್ಬಂಗಾ ಕೂಡಾ ಸೇರಿದೆ. ಈ ಪ್ರವಾಸದ ಉದ್ದೇಶ ಫಿನಿಶ್ ಸೊಸೈಟಿಯ ಶುಚಿತ್ವ ಮತ್ತು ನೈರ್ಮಲ್ಯ ಕಾರ್ಯಕ್ರಮದ ಬಗ್ಗೆ ಸ್ಥಳೀಯರು ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ತಿಳಿಯುವುದಾಗಿದೆ. ಪ್ರವಾಸದುದ್ದಕ್ಕೂ ಹರ್ಮನ್ ವೃದ್ಧರು, ಮಕ್ಕಳು, ಯುವಕರು, ಮಹಿಳೆಯರು, ಪುರುಷರು, ಸರಕಾರಿ ಅಧಿಕಾರಿಗಳು ಹಾಗೂ ಇತರ ಎಲ್ಲರಲ್ಲೂ ಶುಚಿತ್ವ ಹಾಗೂ ಶೌಚಾಲಯ ನೈರ್ಮಲ್ಯದ ಬಗ್ಗೆ ವಿವಿಧ ಪ್ರಶ್ನೆಗಳನ್ನು ಕೇಳಲಿದ್ದಾರೆ. ಅದರ ಜೊತೆಗೆ ಹರ್ಮನ್ ತಮ್ಮ ಮೊಬೈಲ್ ಫೋನ್ ಮೂಲಕ ವಿಡಿಯೊ ಚಿತ್ರೀಕರಣ ನಡೆಸಲಿದ್ದಾರೆ ಮತ್ತು ಅವುಗಳನ್ನು ಸಾಮಾಜಿಕ ಜಾಲತಾಣಗಳು ಹಾಗೂ ಫಿನಿಶ್ ಸೊಸೈಟಿಯ ಜಾಲತಾಣದಲ್ಲಿ ಹಾಕಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News