ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಿ: ಡಾ.ವಿನಯ್ ಹೆಗ್ಡೆ

Update: 2018-01-26 09:36 GMT

ಮೂಡುಬಿದಿರೆ, ಜ.26: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ 69ನೇ ಗಣರಾಜ್ಯೋತ್ಸವ ಆಚರಣೆಯು ವಿಜೃಂಭಣೆಯಿಂದ ನೆರವೇರಿತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ನಿಟ್ಟೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಎನ್.ವಿನಯ್ ಹೆಗ್ಡೆೆ, ಮುಂದಿನ ಭವಿಷ್ಯವಾಗಿರುವ ನೀವೆಲ್ಲರೂ ಸಮಾಜಮುಖಿ ವ್ಯಕ್ತಿತ್ವವನ್ನು ರೂಢಿಸಿಕೊಂಡು, ಧಾರ್ಮಿಕ ಸಾಮರಸ್ಯ ತರುವಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಕರ್ನಾಟಕದ ಬೆಂಗಳೂರು, ಮಡಿಕೇರಿ ಸೇರಿದಂತೆ ವಿವಿಧ ಸ್ಥಳಗಳಿಂದ ಆಗಮಿಸಿದ್ದ 1,200ಕ್ಕೂ ಅಧಿಕ ಎನ್‌ಸಿಸಿ ಕೆಡೆಟ್ಸ್ ಹಾಗೂ ಸ್ಕೌಟ್ಸ್, ಗೈಡ್ಸ್‌ಗಳ ಅಭೂತಪೂರ್ವ ಪಥಸಂಚಲನಕ್ಕೆ ಗಣರಾಜ್ಯ ಸಂಭ್ರಮ ಸಾಕ್ಷಿಯಾಯಿತು. 180 ಎನ್‌ಸಿಸಿ ಕೆಡೆಟ್ಸ್ ರಾಷ್ಟ್ರಧ್ವಜಕ್ಕೆ ಬಂಧೂಕಿ ಸಲಾಮಿ ಸಲ್ಲಿಸಿದರು.

ಧ್ವಜಾರೋಹಣ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಮತ್ತಿತರ ರಗಣ್ಯರು ಉಪಸ್ಥಿತರಿದ್ದರು.

ಎಲ್ಲವೂ ತ್ರಿವರ್ಣಮಯ
ಕೋಟಿ ಕಂಠೋಂಸೇ ರಾಷ್ಟ್ರ ಐಕ್ಯ ಗೀತೆಗೆ ನೆರೆದವರೆಲಾ ್ಲತ್ರಿವರ್ಣ ಧ್ವಜವನ್ನು ಹಾರಿಸಿದರು. 300ಕ್ಕೂ ಅಧಿಕ ವಿದ್ಯಾರ್ಥಿಗಳು ತ್ರಿವರ್ಣದ ಕೊಡೆಯನ್ನು ತಿರುಗಿಸಿದರು. ಇದೇ ವೇಳೆಯಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣದ ಬಲೂನ್‌ಗಳನ್ನು ಹಾರಿ ಬಿಡಲಾಯಿತು.

ಸಮಾರಂಭಕ್ಕೆ ಸಾಕ್ಷಿಯಾದ 35,000 ಪ್ರೇಕ್ಷಕರು!
ಕಾರ್ಯಕ್ರಮದಲ್ಲಿ ಸುಮಾರು 35,000ಕ್ಕೂ ಅಧಿಕ ಮಂದಿ ಭಾಗವಹಿಸಿ ಮೆರುಗು ನೀಡಿದರು. ಭಾರತೀಯ ಸೇನೆಯ ಅನೇಕ ನಿವೃತ್ತ ಸೇನಾಧಿಕಾರಿಗಳು ಧ್ವಜಾರೋಹಣದಲ್ಲಿ ಭಾಗಿಯಾದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News