ಭಟ್ಕಳ: ಮನೆಗೆ ನುಗ್ಗಿ ಚಿನ್ನಾಭರಣ ಕಳವು

Update: 2018-01-27 19:12 GMT

ಭಟ್ಕಳ, ಜ. 27: ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಜಾಮಿಯಾಬಾದ್ ರಸ್ತೆಯ ರಹ್ಮತಾಬಾದ್ ಎಂಬ ಪ್ರದೇಶದ ಮನೆಯೊಂದಕ್ಕೆ ಶನಿವಾರ ರಾತ್ರಿ ನಗ್ಗಿದ ದರೋಡೆಕೋರರು ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಮೊಹ್ಸಿನ್ ಬರ್ಮಾವರ್ ಎಂಬವರ ಮನೆಯಲ್ಲಿ ಶುಕ್ರವಾರ ಸಂಜೆಯಿಂದ ಶನಿವಾರ ರಾತ್ರಿ 9ಗಂಟೆಯವರೆಗೆ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ದರೋಡೆಕೋರರು ಮನೆಯ ಬಾಗಿಲನ್ನು ಮುರಿದು ಒಳನುಗ್ಗಿ ಬೆಲೆಬಾಳುವ ವಸ್ತುಗಳಿಗಾಗಿ ಹುಡುಕಾಟ ನಡೆಸಿದ್ದು, ನಂತರ ಲಾಕರ್ ಒಂದನ್ನು ದೋಚಿಕೊಂಡು ಪರಾರಿಯಾಗಿದ್ದು, ಲಾಕರ್ ನಲ್ಲಿ ಸುಮಾರು 100 ಗ್ರಾಂ ಚಿನ್ನದ ಒಡವೆ ಇತ್ತು ಎಂದು ಮನೆಯ ಸದಸ್ಯರು ದೂರಿನಲ್ಲಿ ತಿಳಿಸಿದ್ದಾರೆ. 

ಕುಟುಂಬದ ಸದಸ್ಯರೊಬ್ಬರ ಚಿಕಿತ್ಸೆಗಾಗಿ ಶುಕ್ರವಾರ ಮನೆಮಂದಿ ಮಂಗಳೂರಿಗೆ ಹೋಗಿದ್ದು, ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ದರೋಡೆ ಕೋರರು ಚಿನ್ನಾಭರಣ ದೋಚಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಇಲ್ಲಿನ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News