ಲೈಂಗಿಕ ಕಿರುಕುಳ ಪ್ರಕರಣದ ಅಪರಾಧಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವದ ಅತಿಥಿ !

Update: 2018-01-28 17:35 GMT

ಪಂಚಕುಲ, ಜ. 27: ರುಚಿಕಾ ಗಿರ್ಹೋತ್ರ ಲೈಂಗಿಕ ಕಿರುಕುಳ ಪ್ರಕರಣದ ಅಪರಾಧಿ ಹರ್ಯಾಣದ ಮಾಜಿ ಪೊಲೀಸ್ ಮಹಾ ನಿರ್ದೇಶಕ ಎಸ್.ಪಿ.ಎಸ್. ರಾಥೋಡ್ ಪಂಚಕುಲದಲ್ಲಿ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಗಣ್ಯರೊಂದಿಗೆ ವೇದಿಕೆ ಹಂಚಿಕೊಂಡಿರುವುದು ವಿವಾದ ಸೃಷ್ಟಿಸಿದೆ. ಸೆಕ್ಟರ್ 5 ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಧ್ವಜಾರೋಹಣ ಕಾರ್ಯಕ್ರಮದ ಬಳಿಕ ರಾಥೋಡ್ ವೇದಿಕೆಯ ಮುಂದಿನ ಸಾಲಿನಲ್ಲಿ ಎಡಬದಿಯಲ್ಲಿ ಕುಳಿತಿದ್ದರು. ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿ ತ್ರಿವರ್ಣ ಧ್ವಜಕ್ಕೆ ಮಾಡಿದ ಅವಮಾನ ಎಂದು ರುಚಿಕಾ ಗೆಳತಿ ಆರಾಧನಾ ಗುಪ್ತಾ ಹೇಳಿದ್ದಾರೆ. ‘‘ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರಬೇಕು. ಇದು ಸ್ಥಳೀಯಾಡಳಿತಕ್ಕೆ ನಾಚಿಕೆಗೇಡು.

ಸುಪ್ರೀಂ ಕೋರ್ಟ್‌ನಿಂದ ಅಪರಾಧಿ ಎಂದು ಪರಿಗಣಿಸಿದ ಕ್ರಿಮಿನಲ್‌ಗಳಿಗೆ ಅವಕಾಶ ನೀಡುವ ಮೂಲಕ ಸ್ಥಳೀಯಾಡಳಿತ ಅಪರಾಧವನ್ನು ನೇರವಾಗಿ ಉತ್ತೇಜಿಸುತ್ತಿದೆ’’ ಎಂದು ಆರಾಧನಾ ಹೇಳಿದ್ದಾರೆ. ಬಾಕ್ಸ್ ರಾಥೋಡ್ ಪಂಚಕುಲದಲ್ಲಿರುವ ಸೆಕ್ಟರ್ 6ರ ಲಾನ್ ಟೆನ್ನಿಸ್ ಅಸೋಸಿಯೇಶನ್ ಕಚೇರಿ ಹಾಗೂ ತನ್ನ ಮನೆಯಲ್ಲಿ 1990 ಆಗಸ್ಟ್ 12ರಂದು ಲೈಂಗಿಕ ಕಿರುಕುಳ ನೀಡಿದ್ದ. ಘಟನೆ ಸಂಭವಿಸಿದ ಮೂರು ವರ್ಷಗಳ ಬಳಿಕ ರುಚಿಕಾ ಆತ್ಮಹತ್ಯೆಗೆ ಶರಣಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News