ಬೋಪಣ್ಣ-ಬಾಬೊಸ್ ರನ್ನರ್-ಅಪ್

Update: 2018-01-28 18:18 GMT

ಮೆಲ್ಬೋರ್ನ್, ಜ.28: ರೋಹನ್ ಬೋಪಣ್ಣ ಹಾಗೂ ಹಂಗೇರಿಯದ ಟಿಮಿಯಾ ಬಾಬೊಸ್ ಆಸ್ಟ್ರೇಲಿಯನ್ ಓಪನ್‌ನ ಮಿಶ್ರ ಡಬಲ್ಸ್‌ನಲ್ಲಿರನ್ನರ್ಸ್‌-ಅಪ್‌ಗೆ ತೃಪ್ತಿಪಟ್ಟು ಕೊಂಡಿದ್ದಾರೆ. ಇಲ್ಲಿ ರವಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಬೋಪಣ್ಣ ಹಾಗೂ ಬಾಬೊಸ್ ಕ್ರೊಯೇಷಿಯ-ಕೆನಡಾದ ಜೋಡಿ ಮ್ಯಾಟ್ ಪಾವಿಕ್ ಹಾಗೂ ಗ್ಯಾಬ್ರಿಲಾ ಡಾಬ್ರೊವ್‌ಸ್ಕಿ ವಿರುದ್ಧ 6-2, 4-6, 9-11 ಸೆಟ್‌ಗಳಿಂದ ಸೋತಿದ್ದಾರೆ.

ಒಂದು ಗಂಟೆ, 8 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಬೋಪಣ್ಣ ಹಾಗೂ ಬಾಬೊಸ್ ಮೊದಲ ಸೆಟ್‌ನ್ನು 6-2 ರಿಂದ ಗೆಲ್ಲುವುದರೊಂದಿಗೆ ಉತ್ತಮ ಆರಂಭ ಪಡೆದಿದ್ದರು. ಪಾವಿಕ್ ಹಾಗೂ ಡಾಬ್ರೊವ್‌ಸ್ಕಿ ಎರಡನೇ ಹಾಗೂ ಮೂರನೇ ಸೆಟ್‌ನ್ನು 6-4, 11-9ರಿಂದ ಜಯ ಸಾಧಿಸುವ ಮೂಲಕ ಪ್ರಶಸ್ತಿ ಗೆದ್ದುಕೊಂಡರು.

ಬೋಪಣ್ಣ 2017ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಡಾಬ್ರೊವ್‌ಸ್ಕಿ ಜೊತೆಗೂಡಿ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News