ಮುದುಂಗಾರುಕಟ್ಟೆ: ಎಸ್ಸೆಸ್ಸೆಫ್ ನಿಂದ ಬುರ್ದಾ ಮಜ್ಲಿಸ್

Update: 2018-01-30 08:21 GMT

ಮುಡಿಪು, ಜ.30: ಎಸ್ಸೆಸ್ಸೆಫ್ ಮುದುಂಗಾರುಕಟ್ಟೆ ಶಾಖೆಯ ವತಿಯಿಂದ 21ನೇ ವಾರ್ಷಿಕೋತ್ಸವದ ಅಂಗವಾಗಿ ಬುರ್ದಾ ಮಜ್ಲಿಸ್, ಧಾರ್ಮಿಕ ಉಪನ್ಯಾಸ ಹಾಗೂ ತಾಜುಲ್ ಉಲಮಾ, ನೂರುಲ್ ಉಲಮಾ, ಪೊಸೋಟು ತಂಙಳ್ ಅನುಸ್ಮರಣೆ ಕಾರ್ಯಕ್ರಮವು ಮುದುಂಗಾರುಕಟ್ಟೆ ಜುಮಾ ಮಸ್ಜಿದ್ ವಠಾರದಲ್ಲಿ ಇತ್ತೀಚೆಗೆ ನಡೆಯಿತು.

ಮುದುಂಗಾರುಕಟ್ಟೆ ಜಮಾಅತ್ ಅಧ್ಯಕ್ಷ ಯು.ಎಂ.ಅಬೂಬಕರ್ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಜಮಾಅತ್ ಖತೀಬ್ ಹೈದರ್ ಅಲಿ ಹಿಮಮಿ ಉದ್ಘಾಟಿಸಿದರು. ಮುಹಮ್ಮದ್ ರಫೀಕ್ ಸಅದಿ ದೇಲಂಬಾಡಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.

ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸದಸ್ಯ ಜಮಾಲುದ್ದೀನ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆಯಿತು. ಹಾಫಿಳ್ ಸ್ವಾದಿಖ್ ಅಲಿ ಅಲ್ ಫಾಳಿಲ್ ಗೂಡಲ್ಲೂರು ಟೀಮ್ ನಿಂದ ಬುರ್ದಾ ಆಲಾಪನೆ ನಡೆಯಿತು. ಮಾಸ್ಟರ್ ಶಹೀನ್ ಬಾಬು, ಮಾಸ್ಟರ್ ನಾಸಿಫ್ ಕ್ಯಾಲಿಕೆಟ್, ಮಾಸ್ಟರ್ ಸಫ್ವಾನ್ ಮಲಾರ್ ರವರಿಂದ 'ಇಶಲ್ ವಿರುನ್ನು' ಕಾರ್ಯಕ್ರಮ ನಡಯಿತು. ಸಲೀಂ ರಝಾ ಖಾದಿರಿ ನಾಗ್ಪುರ ಉರ್ದುವಿನಲ್ಲಿ ನ ಅತ್ ಶರೀಫ್ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ  ಸಯ್ಯದ್ ಸಿ.ಟಿ.ಎಂ.ಕುಂಞಿಕೋಯ ತಂಙಳ್ ಮುಡಿಪು, ಶೈಖುನಾ ಮಹ್ಮೂದುಲ್ ಫೈಝಿ ವಾಲೆಮುಂಡೋವು, ಮುಹಮ್ಮದ್ ಅಲಿ ಫೈಝಿ ಬಾಳೆಪುಣಿ ಉಸ್ತಾದ್, ಎಸ್.ವೈ.ಎಸ್. ಕರ್ನಾಟಕ ರಾಜ್ಯ ಉಪಾಧ್ಯಕ್ಷ ಸಿದ್ದೀಕ್ ಸಖಾಫಿ ಮೂಳೂರು, ಎಸ್ಸೆಸ್ಸೆಫ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಸಖಾಫಿ, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯ ಇಸ್ಮಾಯೀಲ್ ಮಾಸ್ಟರ್ ಮೊಂಟೆಪದವು, ಕೆ.ಬಿ.ಅಬ್ದುಲ್ ರಹಿಮಾನ್ ಮದನಿ ಮಧ್ಯನಡ್ಕ, ಪಿ.ಕೆ.ಮುಹಮ್ಮದ್ ಮದನಿ ಸಂಬಾರತೋಟ, ಇಬ್ರಾಹಿಂ ಸಅದಿ ಇರಾ, ಮುಹಮ್ಮದ್ ಮದನಿ ಸಾಮಾಣಿಗೆ ,ಇಸ್ಮಾಯೀಲ್ ಸಅದಿ ಉಮಿಯತ್ತಡ್ಕ, ಯಹ್ಯಾ ಝುಹ್ರಿ ಕಡ್ವಾಯಿ, ಹುಸೈನ್ ಸಖಾಫಿ ಸಿ.ಎಂ. ನಗರ ಪಾತೂರು, ನಾಸಿರುದ್ದೀನ್ ಮದನಿ ಪಡಿಕ್ಕಲ್, ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ಅಧ್ಯಕ್ಷ ಸಿದ್ದೀಕ್ ಹಿಮಮಿ , ಅಬೂಬಕರ್ ಸಖಾಫಿ ಮುದುಂಗಾರುಟ್ಟೆ, ಅಬ್ದುಲ್ ಸಮದ್ ಮದನಿ, ಆಸಿಫ್ ಸಖಾಫಿ ಮುಡಿಪು, ಅಬ್ದುಲ್ ಮಜೀದ್ ಸಖಾಫಿ ಅಮ್ಮುಂಜೆ,  ಅಬ್ದುಲ್ ರಝಾಕ್ ಸಖಾಫಿ ಪರಪ್ಪು, ಎಸ್.ಕೆ.ಅಬ್ದುಲ್ ಖಾದರ್ ಹಾಜಿ ಸಂಬಾರತೋಟ, ಎಸ್.ಎಸ್. ಮೂಸ ಹಾಜಿ ಸಂಬಾರ್ ತೋಟ, ಕೆ.ಎ.ಹಮೀದ್ ಹಾಜಿ, ಸಿ.ಎಚ್.ಮುಹಮ್ಮದ್ ಹಾಜಿ, ಪುತ್ತುಬಾವ  ಹಾಜಿ ಸಂಬಾರ ತೋಟ, ಅಬೂಬಕರ್ ಮಧ್ಯನಡ್ಕ ಮೊದಲಾದವರು ಉಪಸ್ಥಿತರಿದ್ದರು

ಯು.ಕೆ.ಅಬೂಬಕರ ಮದನಿ ಸ್ವಾಗತಿಸಿದರು ಎಸ್ಸೆಸ್ಸೆಫ್ ಮುದುಂಗಾರು ಕಟ್ಟೆ ಶಾಖೆ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News