ತ್ರಿವಳಿ ತಲಾಖ್ ಸಂತ್ರಸ್ತೆಯರಿಗೆ ಪ್ರತಿ ತಿಂಗಳು 15 ಸಾವಿರ ರೂ. ನೀಡಿ: ಉವೈಸಿ

Update: 2018-01-30 12:44 GMT

ಹೈದರಾಬಾದ್, ಜ. 30: ಬಜೆಟ್ ಅಧಿವಶನದಲ್ಲಿ ಚರ್ಚೆಗೆ ಬರಲಿದೆ ಎಂದು ನಿರೀಕ್ಷಿಸಲಾಗುತ್ತಿರುವ ತ್ರಿವಳಿ ತಲಾಖ್ ಮಸೂದೆಯ ವಿರುದ್ಧ ಆಲ್ ಇಂಡಿಯ ಮಜ್ಲಿಸೆ ಇತ್ತಿಹಾದುಲ್ ಮುಸ್ಲಿಮೀನ್ ನಾಯಕ ಅಸಾದುದ್ದೀನ್ ಉವೈಸಿ ಮತ್ತೊಮ್ಮೆ ಕಿಡಿಕಾರಿದ್ದಾರೆ. ಮೋದಿ ಸರಕಾರ ತಂದಿರುವ ತ್ರಿವಳಿ ತಲಾಖ್ ಮಸೂದೆ ಅಪ್ರಾಯೋಗಿಕವಾದುದು. ಈಗ ಯಾವ ರೀತಿಯ ಆರ್ಥಿಕ ಸೌಲಭ್ಯಗಳನ್ನು ಮಸೂದೆಯಲ್ಲಿ ತ್ರಿವಳಿ ತಲಾಖ್ ಸಂತ್ರಸ್ತೆಯರಿಗೆ  ರೂಪಿಸಿಲ್ಲ.

 2018 ಬಜೆಟ್ ಅಧಿವೇಶನದಲ್ಲಿ ಸಂತ್ರಸ್ತೆಯರಿಗೆ ಆರ್ಥಿಕ ಸಹಾಯಕ್ಕಾಗಿ ನಿಧಿಯನ್ನು ಮೀಸಲಿರಿಸಬೇಕು. ತ್ರಿವಳಿ ತಲಾಖ್ ಸಂತ್ರಸ್ತೆಯರ ಕಾನೂನು ಕ್ರಮಗಳು ಕೊನೆಗೊಳ್ಳುವವರೆಗೆ ಪ್ರತಿ ತಿಂಗಳು ಹದಿನೈದು ಸಾವಿರ ರೂಪಾಯಿ ನೀಡುವ ವ್ಯವಸ್ಥೆಯನ್ನು ಮಾಡಬೇಕಿದೆ ಎಂದು ಉವೈಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News