ಜ.31ರಿಂದ ಕಲ್ಕಟ್ಟ ಮಸೀದಿಯಲ್ಲಿ ವಿವಿಧ ಕಾರ್ಯಕ್ರಮ

Update: 2018-01-31 04:44 GMT

ಉಳ್ಳಾಲ, ಜ. 31: ಮಂಜನಾಡಿ ಕಲ್ಕಟ್ಟ ಇಲ್ಯಾಸ್ ಜುಮಾ ಮಸೀದಿ, ಎಸ್‌ವೈಎಸ್, ಎಸ್ಸೆಸ್ಸೆಫ್ ಹಾಗೂ ಟಿ.ಐ.ವೈ.ಎ. ವತಿಯಿಂದ ಜ. 31ರಿಂದ ಫೆ.4ರ ವರೆಗೆ ಸಂಜೆ 7ರ ಬಳಿಕ ಕಲ್ಕಟ್ಟ ಮಸೀದಿಯಲ್ಲಿ ದ್ಸಿಕ್ರ್, ಜಲಾಲಿಯ್ಯ, ಸ್ವಲಾತ್ ಮಜ್ಲಿಸ್‌ಗಳ ವಾರ್ಷಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಥಳೀಯ ಖತೀಬ್ ಇಝ್ಝುದ್ದೀನ್ ಅಹ್ಸನಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಮಾಧ್ಯಮ ಕಾರ್ಯದರ್ಶಿ ಕೆ.ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜ.31ರಂದು ಅಲ್ ಮದೀನ ಸಂಸ್ಥೆಯ ಅಧ್ಯಕ್ಷ ಅಬ್ಬಾಸ್ ಉಸ್ತಾದ್ ದುಆಗೈಯಲಿದ್ದು, ಮಂಜನಾಡಿ ಕೇಂದ್ರ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ ಕಾರ್ಯಕ್ರಮ ಉದ್ಘಾಟಿಸಲಿರುವರು. ಬಳಿಕ ಬುರ್ದಾ ಆಲಾಪನೆ ನಡೆಯಲಿದೆ.

ಫೆ.1ರಂದು ಅಸ್ಸೈಯದ್ ಅಶ್ರಫ್ ತಂಙಳ್ ಆದೂರು ನೇತೃತ್ವದಲ್ಲಿ ದ್ಸಿಕ್ರ್ ಮಜ್ಲಿಸ್ ನಡೆಯಲಿದ್ದು, ರಾಫಿ ಅಹ್ಸನಿ ಕಾಂತಪುರಂ ಪ್ರವಚನ ನೀಡುವರು.
ಫೆ.2ರಂದು ಅಸ್ಸೈಯದ್ ಶಿಹಾಬುದ್ದೀನ್ ಕಿಲ್ಲೂರು ತಂಙಳ್ ಉಪಸ್ಥಿತಿಯಲ್ಲಿ ಹಂಝ ಮಿಸ್ಬಾಹಿ ಓಟಪದವು ಪ್ರವಚನ ನೀಡುವರು. ಫೆ.3ರಂದು ಅಸ್ಸೈಯದ್ ಕೆ.ಎಸ್. ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಜಲಾಲಿಯ್ಯ ವಾರ್ಷಿಕ ನಡೆಯಲಿದ್ದು, ಅಶ್ರಫ್ ಜೌಹರಿ ಎಮ್ಮೆಮಾಡು ಉಪನ್ಯಾಸ ನೀಡುವರು.

ಫೆ.4ರಂದು ಸ್ವಲಾತ್ ವಾರ್ಷಿಕ ಕಾರ್ಯಕ್ರಮ ನಡೆಯಲಿದೆ. ಅಸ್ಸೈಯದ್ ಇಬ್ರಾಹೀಂ ಖಲೀಲ್ ಬುಖಾರಿ ಕಡಲುಂಡಿ ತಂಙಳ್ ನೇತೃತ್ವದಲ್ಲಿ ನಡೆಯಲಿದ್ದು, ಪೇರೋಡ್ ಮುಹಮ್ಮದ್ ಅರ್ಹರಿ ಈಜಿಪ್ಟ್ ಮುಖ್ಯ ಭಾಷಣ ಮಾಡುವರು ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಮುಹಮ್ಮದ್ ಅಶ್ರಫ್, ಕಾರ್ಯದರ್ಶಿ ಕೆ.ಎಂ. ಮುಹಮ್ಮದ್, ಕೋಶಾಧಿಕಾರಿ ಮೊಯ್ದಿನ್ ಕುಂಞಿ, ಜತೆ ಕಾರ್ಯದರ್ಶಿ ಕೆ.ಎಂ ಮುಹಮ್ಮದ್ ಶರೀಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News