×
Ad

ಮಗುವಿನ ತಲೆಗೆ ಬಂದೂಕಿಟ್ಟು ಎಟಿಎಂನೊಳಗೇ ದಂಪತಿಯ ಹಣ ದೋಚಿದ!

Update: 2018-01-31 19:32 IST

ಇಂದೋರ್, ಜ.31: ದುಷ್ಕರ್ಮಿಯೊಬ್ಬ ಮಗುವಿಗೆ ಬಂದೂಕು ತೋರಿಸಿ ಎಟಿಎಂನೊಳಗೆ ದಂಪತಿಯನ್ನು ದರೋಡೆಗೈದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ಪಂಜಾಬ್ ನ್ಯಾಶನಲ್ ಬ್ಯಾಂಕ್ ನ ಎಟಿಎಂನೊಳಗೆ ಈ ಘಟನೆ ನಡೆದಿದೆ. ದರೋಡೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ 2017ರ ಡಿಸೆಂಬರ್ 24ರಂದು ನಡೆದಿತ್ತು ಎನ್ನಲಾಗಿದ್ದು, ಈಗ ವಿಡಿಯೋ ವೈರಲ್ ಆಗುತ್ತಿದೆ.

ದಂಪತಿ ಎಟಿಎಂಗೆ ಕಾಲಿಡುತ್ತಿದ್ದಂತೆ ನುಗ್ಗಿದ ಆಗಂತುಕ ಬಂದೂಕು ತೋರಿಸಿ ಬೆದರಿಸಿದ್ದಾನೆ. ನಂತರ ಮಗುವಿನ ತಲೆಗೆ ಬಂದೂಕಿಟ್ಟು ಹಣ ದೋಚಿದ್ದಾನೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News